ಟಿಬಿಟಿಯನ್ ಆದ್ಮಾತ್ಮ ಗುರು ದಲೈಲಾಮಾ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಪ್ರಾಪ್ತ ಬಾಲಕನೊಬ್ಬನ ತುಟಿಗೆ ಚುಂಬಿಸಿದ್ದಾರೆ ಎನ್ನಲಾಗಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ವೀಡಿಯೋದಲ್ಲಿ ಏನಿದೆ..??
ಗಣ್ಯರು ಇರುವ ವೇದಿಕೆ ಮೇಲೆ ದಲೈಲಾಮಾ ಕೂಡ ಕೂತಿರುತ್ತಾರೆ. ಅವರ ಬಳಿ ಅಪ್ರಾಪ್ತ ಶಿಷ್ಯನೊಬ್ಬ ಬರುತ್ತಾನೆ. ಮೊದಲಿಗೆ ತುಟಿಗೆ ಚುಂಬಿಸುತ್ತಾರೆ. ನಂತರ ಅಲ್ಲಿದ್ದವರೆಲ್ಲ ನಗೆಯಾಡುತ್ತಾರೆ. ಮತ್ತೆ ಬಾಲಕನ ಗಲ್ಲವನ್ನು ಹಿಡಿದ ದಲೈ ಲಾಮಾ, ನನ್ನ ನಾಲಿಗೆಯನ್ನು ನೆಕ್ಕುವಂತೆ ಹೇಳ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
ದಲೈ ಲಾಮಾ ಈ ರೀತಿಯ ವಿವಾವಾದಗಳಲ್ಲಿ ಸಿಲುಕಿಕೊಳ್ಳುವುದು ಮೊದಲೇನೂ ಅಲ್ಲ. ಈ ಹಿಂದೆ ತನ್ನ ಪಟ್ಟಾಧಿಕಾರ ಮುಗಿದ ಬಳಿಕ ‘ಸುಂದರ ಮಹಿಳೆಯೊಬ್ಬರು ಉತ್ತರಾಧಿಕಾರಿಯಾಗಲಿ’ ಎಂದಿದ್ದರು. ಅವರ ಈ ಹೇಳಿಕೆ ಕೂಡ ಭಾರೀ ವೈರಲ್ ಆಗಿತ್ತು.

























