ಪುತ್ತೂರು : ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಎ.10 ರಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.

ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜಾತ್ರೋತ್ಸವ ಆರಂಭಗೊಂಡಿತು.
ಬೆಳಿಗ್ಗೆ ಪುಷ್ಕರಣಿಯಲ್ಲಿರುವ ನೂತನ ಶಿಲಾಮಯ ಮಂಟಪದ ತಳಭಾಗದಲ್ಲಿರುವ ವರುಣ ದೇವರಿಗೆ ಪೂಜೆ ಮತ್ತು ಶಿಲಾಮಯ ಮಂಟಪಕ್ಕೆ ಕಲಶವಿಟ್ಟ ಬಳಿಕ ದೇವಳದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಜಾತ್ರೋತ್ಸವವು 11 ದಿನಗಳ ಕಾಲ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಾಂಸ್ಕೃತಿಕ ವೈವಿಧ್ಯಗಳ ವಿಶೇಷ ಆಕರ್ಷಣೆಗಳೊಂದಿಗೆ ನಡೆಯಲಿದೆ.

























