ವಿಟ್ಲ : ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಕೊರತೆ ಹಾಗೂ ಶೌಚಾಲಯದಲ್ಲಿಯೂ ನೀರು ಬಾರದ ಹಿನ್ನೆಲೆ ಅದಕ್ಕೂ ಬೀಗ ಹಾಕಿರುವ ಘಟನೆ ವಿಟ್ಲ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕಂಡು ಬಂದಿದೆ.
ವಿಟ್ಲ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಅದೇ ರೀತಿ ಶೌಚಾಲಯದಲ್ಲಿಯೂ ನೀರು ಬಾರದ ಹಿನ್ನೆಲೆ ಅದಕ್ಕೂ ಬೀಗ ಹಾಕಲಾಗಿದೆ.

ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಪ್ರಯಾಣಿಕರು ಶೌಚಾಲಯಕ್ಕೂ ತೆರಳದ ಸ್ಥಿತಿ ನಿರ್ಮಾಣವಾಗಿದೆ. ಕೆ.ಎಸ್.ಆರ್.ಟಿ.ಸಿ ನಿರ್ವಾಹಣಾಧಿಕಾರಿ ಇದ್ದರೂ ಅವರು ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ ಎಂದು ಸಾರ್ವಜನಿಕ ಆರೋಪಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ನೀರು ಬರುವ ಬಾವಿಯಿದ್ದರೂ ಅದಕ್ಕೆ ಹಾಕಿರುವ ಪಂಪ್ ಸೆಟ್ ಸರಿಯಿಲ್ಲದ ಕಾರಣ ನೀರು ಬರುತ್ತಿಲ್ಲ., ಈ ಬಗ್ಗೆ ಅಧಿಕಾರಿಗೆ ಮಾಹಿತಿ ನೀಡಿದರೂ ಯಾವ ರೀತಿಯೂ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..


























