ವಿಟ್ಲ : ಪೊಲೀಸರ ತಂಡ ಉಕ್ಕುಡ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ವಾಹನದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆಯಾಗಿದ್ದು, ವಾಹನ ಸಹಿತ ಓರ್ವನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ವಾಹನ ಚಾಲಕ ಕುದ್ದುಪದವು ಸುರುಳಿಮೂಲೆ ನಿವಾಸಿ ಅಲಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಡಿತರ ಮಾಫಿಯಾ ದಂಧೆ ಬಯಲಾಗಿದೆ.

ಬಳಿಕ ಪೊಲೀಸರ ತಂಡ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಇರಿಸುವ ಜಾಗಕ್ಕೆ ದಾಳಿ ನಡೆಸಿದ್ದು, ಅಡ್ಯನಡ್ಕ ಸಮೀಪದ ಮರಕ್ಕಿಣಿ ನಿವಾಸಿ ಸಿಮೆಂಟ್ ಎಜೆಂಟ್ ಹನೀಫ್ ಎಂಬಾತನಿಗೆ ಸೇರಿದ ಗೋದಾಮ್ ನಿಂದ 220 ಗೋಣಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಟ್ಲದ ದಿನಸಿ ವ್ಯಾಪಾರಿಯೇ ಇದರ ಕಿಂಗ್ ಪಿನ್ ಎನ್ನಲಾಗಿದೆ.

ವಿಟ್ಲ ಠಾಣಾ ಇನ್ಸ್ಪೆಕ್ಟರ್ ಹೆಚ್.ಇ. ನಾಗರಾಜ್, ಎಸ್.ಐ ಸಂದೀಪ್ ಕುಮಾರ್ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ..
























