ದ.ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ 132ನೇ ಜನ್ಮದಿನೋತ್ಸವವನ್ನು ಎ.14 ರಂದು ಆಚರಿಸಲಾಯಿತು.
ದೀಪ ಬೆಳಗಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡುವ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಲಾಯಿತು.

ಜಿಲ್ಲಾಧ್ಯಕ್ಷರಾದ ಅಶೋಕ ನಾಯ್ಕ ಕೆದಿಲ ಮಾತನಾಡಿ, ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ ಹಾಗೂ ಸಾಮಾಜಿಕ ಸಮಾನತೆಯ ಬಗ್ಗೆ ಅವರು ಮಾಡಿದ ಹೋರಾಟದ ಬಗ್ಗೆ ವಿವರವಾಗಿ ತಿಳಿಸಿದರು.
ವೇದಿಕೆಯಲ್ಲಿ ಗಂಗಾಧರ್ ನಾಯ್ಕ, ಅಶೋಕ್ ನಾಯ್ಕ ಬೊಳ್ಳಡಿ, ಪುರಂದರ ನಾಯ್ಕ, ಶ್ರೀಧರ ನಾಯ್ಕ ಉಪಸ್ಥಿತರಿದ್ದರು.
ಪುರಂದರ ನಾಯ್ಕ ಕಾರ್ಯಕ್ರಮ ನೀರೂಪಣೆ ಮಾಡಿದರು. ಜ್ಯೋತಿ ಅಶೋಕ್ ನಾಯ್ಕ ವಂದನಾರ್ಪಣೆಗೈದರು. ಸಭೆಯಲ್ಲಿ ತಿರುಮಲೇಶ್ ನಾಯ್ಕ, ರತ್ನವತಿ ನಾಯ್ಕ, ರೇವತಿ ನಾಯ್ಕ, ಆನಂದ ನಾಯ್ಕ, ಶಿವಪ್ಪ ನಾಯ್ಕ ಉಪಸ್ಥಿತರಿದ್ದರು.


























