ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ, ವಿಟ್ಲ ಪಡ್ನೂರು ಇದರ ಯುವಕ ಮಂಡಲದ 2ನೇ ವರ್ಷದ ವಾರ್ಷಿಕ ಕಾರ್ಯಕ್ರಮ ಎ.16 ರಂದು ಅಂಗನವಾಡಿ ವಠಾರ ಪೂರ್ಲಪ್ಪಾಡಿಯಲ್ಲಿ ಜರುಗಿತು.

ಬೆಳಿಗ್ಗೆ 9 ಗಂಟೆಯಿಂದ ಯುವಕ ಮಂಡಲದ ವತಿಯಿಂದ ಬೃಹತ್ ರಕ್ತದಾನ ಶಿಬಿರ, ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ರಕ್ತದ ಗುಂಪು ಪರೀಕ್ಷೆ ಕಾರ್ಯಕ್ರಮಗಳು ನಡೆಯಿತು.
ಮಧ್ಯಾಹ್ನ 2 ರಿಂದ ಶಾಲಾ ವಿಧ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಬಾಷಣ ಸ್ಪರ್ದೆ, ಆಶುಬಾಷಣ ಸ್ಪರ್ಧೆ,ಅಬಿನಯ ಸ್ಪರ್ಧೆ ಹಾಗೂ ಸಂಗೀತ ಸ್ಪರ್ಧೆ ನಡೆದವು. ಹಾಗೂ ಸಂಜೆ ಸಭಾಕಾರ್ಯಕ್ರಮ ಜರುಗಿತು.

ಅಧ್ಯಕ್ಷತೆಯನ್ನು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಕೆ ವಹಿಸಿದ್ದರು. ಅತಿಥಿಗಳಾಗಿ ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಶ್ ರೈ ಎರ್ಮೆನಿಲೆ, ಪಂಚಮಿ ಗ್ರೂಪ್ಸ್ ನ ಮಾಲಕರಾದ ಸತೀಶ್ ಭಟ್ ಪಂಜಿಗದ್ದೆ, ಹಳೆ ವಿದ್ಯಾರ್ಥಿ ಯುವಕ ಮಂಡಲ (ರಿ) ಮಂಕುಡೆ ಇದರ ಸಂಚಾಲಕರಾದ ರಮೇಶ್ ಮಂಕುಡೆ, ಶ್ರೀ ಮಲರಾಯಿ ದೈವಸ್ಥಾನ ಆಡಳಿತ ಸೇವಾ ಟ್ರಸ್ಟ್ (ರಿ) ಪೂರ್ಲಪ್ಪಾಡಿ ಇದರ ಅಧ್ಯಕ್ಷರಾದ ರಾಮಣ್ಣ ಗೌಡ ದೇವರಮನೆ, ದ.ಕ.ಜಿ.ಪ.ಉ.ಹಿ.ಪ್ರಾ.ಶಾಲೆ ಮಂಕುಡೆ ಇದರ ಮುಖ್ಯೋಪಾಧ್ಯಾಯಿನಿ ಶೋಭಾ ಪಿ ಕೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಾ ಅಧಿಕಾರಿ ಸುಜಾತಾ ಮಹೇಶ್ ದೇವರಮನೆ, ಶ್ರೀವರ ಯುವಕ ಮಂಡಲದ ಗೌರವಾಧ್ಯಕ್ಷರಾದ ಈಶ್ವರ ಭಟ್ ಬದನಾಜೆ, ಶ್ರೀವರ ಯುವಕ ಮಂಡಲದ ಅಧ್ಯಕ್ಷರಾದ ಜಯಂತ್ ಪೂರ್ಲಪ್ಪಾಡಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಯುವಕ ಮಂಡಲದ ವತಿಯಿಂದ ನಡೆದ ವಿವಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಳವಿ ಯತೀಶ್, ನಿಶ್ಮಿತಾ, ಗೌತಮಿ ಪ್ರಾರ್ಥಿಸಿದರು. ಪ್ರಾಸ್ತಾವಿಕ ಹಾಗೂ ಸ್ವಾಗತ ಜಯಂತ ಪಿ ನಡೆಸಿದರು. ಮಂಡಲದ ಉಪಾಧ್ಯಕ್ಷ ಗಿರೀಶ್ ಪಿ ಆರ್ ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ನಂತರ ಯುವಕ ಮಂಡಲದ ಸದಸ್ಯರಿಂದ, ಶಾಲಾ ವಿಧ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಅಭಿನಯ ಕಲಾವಿದರು ಮಂಕುಡೆ ಕುಡ್ತಮುಗೇರು ಅಭಿನಯಿಸಿದ ತುಳು ಹಾಸ್ಯಮಯ ನಾಟಕ “ಈ ತೆರಿನಗ ನನದಾದ ಒರಿಂಡ್..?” ಕಾರ್ಯಕ್ರಮ ಜರುಗಿತು.































