ಬೆಂಗಳೂರು : ಪ್ರಮುಖ ಪಕ್ಷವಾದ ಬಿಜೆಪಿ ಹಾಗೂ ಕಾಂಗ್ರೆಸ್ ರಾಜ್ಯದ ಎಲ್ಲ 224 ಕ್ಷೇತ್ರಗಳಿಗೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇಂದಿನಿಂದ ಚುನಾವಣಾ ಕಣ ಕೂಡ ಮತ್ತಷ್ಟು ರಂಗೇರಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ವಂಚಿತ ಅಕಾಂಕ್ಷಿಗಳಿಗೆ ಜೆಡಿಎಸ್ ರೆಡ್ ಕಾರ್ಪೆಟ್ ಹಾಕಿದೆ.
ಜೆಡಿಎಸ್ ಮಾತ್ರ ಬಾಕಿ ಉಳಿದಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ. ಈ ನಡುವೆ, ನಾಮಪತ್ರ ಸಲ್ಲಿಕೆಗೂ ಇಂದು ಕೊನೆಯ ದಿನವಾಗಿದ್ದು, ಅಂತಿಮವಾಗಿ ಯಾವೆಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ಸಂಜೆಯೊಳಗೆ ನಿರ್ಧಾರವಾಗಲಿದೆ.
ಎ.13 ಚುನಾವಣಾ ಅಧಿಸೂಚನೆ ಮತ್ತು ನಾಮಪತ್ರ ಸಲ್ಲಿಕೆ ಆರಂಭ. ನಾಳೆ ನಾಮಪತ್ರಗಳ ಕ್ರಮಬದ್ಧತೆ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಎ.24 ಕೊನೆ ದಿನವಾಗಿದೆ.


























