ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್, ಸಹಕಾರ ಕ್ಷೇತ್ರದಲ್ಲಿ ತನ್ನದೇ ಶೈಲಿಯ ಛಾಪು ಮೂಡಿಸುತ್ತಾ, ಸದಸ್ಯ ಬಾಂಧವರ ಮನಗೆದ್ದು, 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ ತನ್ನ ಗರಿಷ್ಠ ಕಾರ್ಯದಕ್ಷತೆಯನ್ನು ಮೆರೆದು ರೂ 2,63 ಕೋಟಿಗೂ ಮಿಕ್ಕಿ ಲಾಭಗಳಿಸಿ ವಿಶೇಷ ಸಾಧನೆಯನ್ನು ಮಾಡಿದೆ.
ಪ್ರಸ್ತುತ ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ, ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್ ವಿಟ್ಲದಲ್ಲಿ ಪ್ರಧಾನ ಕಛೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡು ಹಾಗೂ ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿದ್ದು, ಒಟ್ಟು 7525 ಮಂದಿ ಸದಸ್ಯರಿದ್ದು ರೂ. 2.42 ಕೋಟಿ ಪಾಲು ಬಂಡವಾಳವನ್ನು ಹೊಂದಿರುತ್ತದೆ.
ವರದಿ ವರ್ಷದಲ್ಲಿ ದಾಖಲೆಯ ರೂ. 615 ಕೋಟಿಗಳ ವ್ಯವಹಾರವನ್ನು ದಾಖಲಿಸಿ ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 58 ಕೋಟಿ ರೂಪಾಯಿ ಹೆಚ್ಚಿನ ವ್ಯವಹಾರವನ್ನು ಮಾಡಿರುತ್ತದೆ.
ಠೇವಣಿ ಸಂಗ್ರಹಣೆಯಲ್ಲಿ ತುಂಬಾ ಸ್ಪರ್ಧೆಗಳಿದ್ದರೂ ಬ್ಯಾಂಕ್ ರೂ. 120.19 ಕೋಟಿ ರೂಪಾಯಿಗಳ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ 4.46% ರಷ್ಟು ಹೆಚ್ಚಳವಾಗಿರುತ್ತದೆ. ಅಲ್ಲದೆ 67.90 ಕೋಟಿ ರೂಪಾಯಿಗಳ ಹೊರಬಾಕಿ ಸಾಲಗಳಿದ್ದು ಸಾಲ ವಸೂಲಾತಿಯೂ ಕಳೆದ ಸಾಲಿಗಿಂತ ಹೆಚ್ಚಾಗಿದ್ದು ಶೇಕಡಾ 91.54 ಆಗಿರುತ್ತದೆ.
ಪ್ರಸ್ತುತ ಬ್ಯಾಂಕಿನಲ್ಲಿ 7.56 ಕೋಟಿ ರೂಪಾಯಿ ಮೀಸಲು ನಿಧಿಯಿದ್ದು, ರೂ. 10.21 ಕೋಟಿಗಳ ಇತರ ನಿಧಿಗಳನ್ನು ಹೊಂದಿದ್ದು, ರೂ. 2.97 ಕೋಟಿಗಳ ಚರ ಹಾಗೂ ಸ್ಥಿರಾಸ್ತಿಗಳನ್ನು ಹೊಂದಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ, ರೂ. 143.04 ಕೋಟಿಗಳಾಗಿರುತ್ತದೆ. ಬ್ಯಾಂಕ್ ಹಲವಾರು ವರ್ಷಗಳಿಂದ ಅಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿ ಪಡೆಯುತ್ತಾ ಬಂದಿರುತ್ತದೆ.
31-03-2023 ಕ್ಕೆ ಬ್ಯಾಂಕಿನ ಪ್ರಧಾನ ಕಚೇರಿ ಹಾಗೂ ಶಾಖೆಗಳ ಸಾಧನೆಯ ಸಿಂಹಾವಲೋಕನ
ಪ್ರಧಾನ ಕಛೇರಿ : ಒಟ್ಟು ವ್ಯವಹಾರ ರೂ. 359 ಕೋಟಿಗಳಾಗಿದ್ದು, ಠೇವಣಾತಿಯು 69.80 ಕೋಟಿ ರೂಪಾಯಿಗಳಾಗಿರುತ್ತದೆ. 25.03 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 91.78 ಆಗಿರುತ್ತದೆ. ಅಂದಾಜು ರೂ 1.73 ಕೋಟಿ ಲಾಭಗಳಿಸಿರುತ್ತದೆ.
ಕನ್ಯಾನ ಶಾಖೆ : ಒಟ್ಟು ವ್ಯವಹಾರ ರೂ. 69.23 ಕೋಟಿಗಳಾಗಿದ್ದು, ಠೇವಣಾತಿಯು 18.19 ಕೋಟಿ ರೂಪಾಯಿಗಳಾಗಿರುತ್ತದೆ. 7.53 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 97.16 ಆಗಿರುತ್ತದೆ. ಅಂದಾಜು ರೂ 18.32 ಲಕ್ಷ ಲಾಭಗಳಿಸಿರುತ್ತದೆ.
ಕಲ್ಲಡ್ಕ ಶಾಖೆ : ಒಟ್ಟು ವ್ಯವಹಾರ ರೂ. 73.13 ಕೋಟಿಗಳಾಗಿದ್ದು, ಠೇವಣಾತಿಯು 9.35 ಕೋಟಿ ರೂಪಾಯಿಗಳಾಗಿರುತ್ತದೆ. 15,01 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 96.27 ಆಗಿರುತ್ತದೆ. ಅಂದಾಜು ರೂ 39.02 ಲಕ್ಷ ಲಾಭಗಳಿಸಿರುತ್ತದೆ.
ಬಿ.ಸಿ.ರೋಡ್ ಶಾಖೆ : ಒಟ್ಟು ವ್ಯವಹಾರ ರೂ. 39.52 ಕೋಟಿಗಳಾಗಿದ್ದು, ಠೇವಣಾತಿಯು 8.80 ಕೋಟಿ ರೂಪಾಯಿಗಳಾಗಿರುತ್ತದೆ. 7.81 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 90.27 ಆಗಿರುತ್ತದೆ. ಅಂದಾಜು ರೂ 7.64 ಲಕ್ಷ ಲಾಭಗಳಿಸಿರುತ್ತದೆ.
ಪುತ್ತೂರು ಶಾಖೆ : ಒಟ್ಟು ವ್ಯವಹಾರ ರೂ. 74.29 ಕೋಟಿಗಳಾಗಿದ್ದು, ಠೇವಣಾತಿಯು 14.02 ಕೋಟಿ ರೂಪಾಯಿಗಳಾಗಿರುತ್ತದೆ. 12.51 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 82.80 ಆಗಿರುತ್ತದೆ. ಅಂದಾಜು ರೂ 25.22 ಲಕ್ಷ ಲಾಭಗಳಿಸಿರುತ್ತದೆ.
2023-24 ಕ್ಕೆ ವ್ಯವಹಾರದ ಗುರಿ:
2023-24 ನೇ ಸಾಲಿನಲ್ಲಿ ಬ್ಯಾಂಕು ರೂ. 660 ಕೋಟಿಗೂ ಮೀರಿದ ವ್ಯವಹಾರವನ್ನು, ರೂ. 130 ಕೋಟಿ ಮೇಲ್ಪಟ್ಟು ಠೇವಣಿ ಸಂಗ್ರಹಣೆ, ರೂ. 83 ಕೋಟಿ ಸಾಲ ನೀಡಿಕೆ, ರೂ. 03 ಕೋಟಿಗೂ ಮೀರಿದ ಲಾಭವನ್ನು ಹಾಗೂ 96 ಶೇಕಡಾ ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಬ್ಯಾಂಕ್ ಅನುಭವಿ ಆಡಳಿತ ಮಂಡಳಿಯನ್ನು ಹೊಂದಿದ್ದು, ಬ್ಯಾಂಕಿನ ಅಧ್ಯಕ್ಷರಾಗಿ ಹೆಚ್, ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಕೆ. ಎಸ್. ನಿರ್ದೇಶಕರಾಗಿ ಎಂ. ಹರೀಶ್ ನಾಯಕ್, ಮನೋರಂಜನ್ ಕೆ. ಆರ್, ವಿಶ್ವನಾಥ್ ಎಂ. ಕೃಷ್ಣ, ಕೆ ಉದಯಕುಮಾರ್, ಎ. ಬಾಲಕೃಷ್ಣ ಪಿ. ಎಸ್. ದಿವಾಕರ ವಿ. ದಯಾನಂದ ಆಳ್ವ ಕೆ. ಸುಂದರ ಡಿ, ಗೋವರ್ಧನ ಕುಮಾರ್. ಐ. ಶುಭಲಕ್ಷ್ಮಿ, ಜಯಂತಿ ಎಚ್. ರಾವ್ ಇವರುಗಳು ಅವಿರತ ಸೇವೆ ಸಲ್ಲಿಸುತ್ತಿದ್ದಾರೆ.
ಬ್ಯಾಂಕಿನಲ್ಲಿ 32 ನುರಿತ ಸಿಬ್ಬಂದಿಗಳಿದ್ದು ಇವರ ಪೂರ್ಣಪ್ರಮಾಣದ ಸಹಕಾರದೊಂದಿಗೆ ಕೃಷ್ಣ ಮುರಳಿ ಶ್ಯಾಮ್, ಕೆ. ಇವರು ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಬ್ಯಾಂಕ್‌ನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತಿದ್ದಾರೆ.


























