ಪುತ್ತೂರು : ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಲ್ಲಿ 10 ಮಂದಿ ಸಲ್ಲಿಸಿದ್ದ ಉಮೇದುವಾರಿಕೆಯಲ್ಲಿ ಇಬ್ಬರು ಹಿಂಪಡೆಯುವ ಮೂಲಕ 8 ಮಂದಿ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಮತಯಂತ್ರದಲ್ಲಿ ಮುದ್ರಿತವಾಗಲಿರುವ ಮಾದರಿ ಮತಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ಹೆಸರು ಮೊದಲಿದೆ. ಪುತ್ತೂರು ಕ್ಷೇತ್ರದ ಚುನಾವಣಾಧಿಕಾರಿಯವರ ಕಚೇರಿ ನೊಟೀಸ್ ಬೋರ್ಡ್‌ನಲ್ಲಿ ಮತಪತ್ರದ ಮಾದರಿಯನ್ನು ಪ್ರಕಟಿಸಲಾಗಿದೆ.
ಅಂತಿಮ ಕಣದಲ್ಲಿರುವ 8 ಅಭ್ಯರ್ಥಿಗಳ ಪೈಕಿ ನಂ.1 – ಅಶೋಕ್ ಕುಮಾರ್ ರೈಯವರು, ನಂ.2- ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ನಂ.3- ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ, ನಂ.4- ಆಮ್ ಆದ್ಮಿ ಪಾರ್ಟಿಯ ಬಿ.ಕೆ. ವಿಶು ಕುಮಾರ್, ನಂ.5- ಎಸ್‌ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಶಾಫಿ ಬೆಳ್ಳಾರೆ, ನಂ.6- ಕರ್ನಾಟಕ ರಾಷ್ಟ್ರ ಸಮಿತಿಯ ಐವನ್ ಫೆರಾವೋ, ನಂ.7- ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ನಂ.8- ಪಕ್ಷೇತರ ಅಭ್ಯರ್ಥಿ ಸುಂದರ ಕೊಯಿಲ ಹೆಸರು ಇದೆ.
ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಸೇರಿ ಮೂರು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ರಾಜ್ಯ ಪಕ್ಷ, ಎಸ್.ಡಿ.ಪಿ.ಐ. ಹಾಗೂ ಕೆ.ಆರ್.ಎಸ್. ಎರಡು ನೋಂದಾಯಿತ ಪಕ್ಷಗಳು, ಇಬ್ಬರು ಪಕ್ಷೇತರಗಳು ಕಣದಲ್ಲಿದ್ದಾರೆ.
ಎಸ್.ಡಿ. ಪಿ.ಐ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಪಿ.ಇಬ್ರಾಹಿಂ, ಜೆ.ಡಿ.ಎಸ್. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಮಹಮ್ಮದ್ ಅಶ್ರಫ್ ಕಲ್ಲೇಗ ಕಣದಿಂದ ಹಿಂದೆ ಸರಿದ್ದಾರೆ.


























