ಪುತ್ತೂರು : ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಪೂರ್ಣ ಬೆಂಬಲ ಬಿಜೆಪಿಗೆ ಎಂದು ಹೇಳಿದ ಅಜಿತ್ ರೈ ಹೊಸಮನೆಯವರು ಈಗಾಗಲೇ ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಸಹ ಸಂಚಾಲಕ ಸ್ಥಾನದಿಂದ ಮುಕ್ತರಾಗಿರುವುದಾಗಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ತಿಳಿಸಿದೆ.
ಹಿಂದು ಜಾಗರಣ ವೇದಿಕೆಯ ಸಂಪೂರ್ಣ ಬಿಜೆಪಿಗೆ ಬೆಂಬಲ ಎಂದು ಅಜಿತ್ ರೈ ರವರು ಹೇಳಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಿಂದು ಜಾಗರಣ ವೇದಿಕೆಯು ಒಂದು ರಾಷ್ಟ್ರೀಯ ಚಿಂತನೆಯ ಅಡಿಯಲ್ಲಿ ತತ್ವ ಸಿದ್ಧಾಂತಕ್ಕೆ ಬದ್ದವಾಗಿರುವ ಹೋರಾಟ ಸಂಘಟನೆ, ಚುನಾವಣಾ ಸಮಯದಲ್ಲಿ ಮುಕ್ತವಾಗಿ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಬೆಂಬಲ ಸೂಚಿಸುವ ಪ್ರಶ್ನೆಯೇ ಇಲ್ಲ ಚುನಾವಣಾ ಸಮಯದಲ್ಲಿ ಈ ಗೊಂದಲದ ಹೇಳಿಕೆ ನೀಡಿ ಸಂಘಟನೆಯನ್ನು ಮುಜುಗರಕ್ಕೆ ಇಡು ಮಾಡಿರುವುದು ಖಂಡನೀಯವಾಗಿದೆ.
ಅಜಿತ್ ರೈ ಹೊಸಮನೆಯವರು ಎರಡು ತಿಂಗಳ ಹಿಂದೆಯೇ ಸ್ವಇಚ್ಚೆಯಿಂದ ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಸಹ ಸಂಚಾಲಕ ಸ್ಥಾನದಿಂದ ಮುಕ್ತರಾಗಿರುವುದಾಗಿ ಹಿಂದು ಜಾಗರಣ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

























