ವಿಟ್ಲ : ಕೇಪು ಬಿಜೆಪಿ ಶಕ್ತಿಕೇಂದ್ರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಕೇಪು ವಲಯ ಕಾರ್ಯದರ್ಶಿ ಧನಂಜಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ರವಿ ಕೊರತಿಗದ್ದೆ, ನಿತಿನ್, ನವೀನ್, ಲೋಕೇಶ್, ಸೃಜನ್,ನಿಖಿಲ್ ಮೊದಲಾದವರು ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಹಾಗೂ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್ ನೇತೃತ್ವದಲ್ಲಿ ಬಿಜೆಪಿ ಸೇರಿದರು.

ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಕೇಪು ಶಕ್ತೀ ಕೇಂದ್ರ ಸಂಚಾಲಕರಾದ ರಾಧಕೃಷ್ಣ ಶೆಟ್ಟಿ,ಕೇಪು ಪಂಚಾಯತ್ ಉಪಾಧ್ಯಕ್ಷರಾದ ರಾಘವ ಸಾರಡ್ಕ,ಪಂಚಾಯತ್ ಸದಸ್ಯರಾದ ಪುರುಷೋತ್ತಮ ಕಲ್ಲಂಗಳ,ಪಕ್ಷದ ಪ್ರಮುಖರಾದ ತಾರಾನಾಥ ಆಳ್ವ, ಬೂತ್ ಅಧ್ಯಕ್ಷರಾದ ಅಶೋಕ್,ಪ್ರಮುಖರಾದ ಉಮೇಶ್ ಗೌಡ, ಶ್ರೀಕೃಷ್ಣ ಮಣಿಯಾಣಿ, ಚಂದ್ರಶೇಖರ್ ಮೊದಲಾದ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.


























