ವಿಟ್ಲ: ವಿಠಲ ಎಜುಕೇಶನ್ ಸೊಸೈಟಿಯ ಆಶ್ರಯದಲ್ಲಿ ನಡೆದ ಬೇಸಿಗೆ ವಿಶೇಷ ತರಬೇತಿ ಶಿಬಿರ – ಫಿಟ್ನೆಸ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್ ಹಾಗೂ ಧ್ಯಾನ ತರಬೇತಿಯ ಸಮಾರೋಪವು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ರಾಧಾಕೃಷ್ಣ ನಾಯಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಠಲ ಎಜುಕೇಶನ್ ಸೊಸೈಟಿಯ ಸದಸ್ಯರಾದ ಭವಾನಿ ರೈ ಕೊಲ್ಯ ವಹಿಸಿದ್ದರು. ಉಪಪ್ರಾಂಶುಪಾಲರಾದ ಕಿರಣ್ ಕುಮಾರ್ ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಸುಧೇಶ್ ಭಂಡಾರಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ ಗೌಡ ನಿರೂಪಿಸಿ, ವಂದಿಸಿದರು. ಉಪನ್ಯಾಸಕರಾದ ಮಾಧವ ವಿ ಎಸ್, ಮುಕ್ತಶ್ರೀ ಸಹಕರಿಸಿದರು.
ಉಪನ್ಯಾಸಕರಾದ ಪ್ರಕಾಶ್ ನಾಯಕ್ ಹಾಗೂ ಜಲಜಾಕ್ಷಿಯವರು ಶಿಬಿರಾರ್ಥಿಗಳಿಗೆ ಲಘು ಉಪಹಾರ ವ್ಯವಸ್ಥೆಗೊಳಿಸಿದರು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಟೀ ಶರ್ಟ್ ಗಳನ್ನು ನೀಡಲಾಯಿತು. ತರಬೇತುದಾರರಾಗಿ ಶಿಶಿರ್ ಹಾಗೂ ಸುಬ್ರಮಣ್ಯ ಸಹಕರಿಸಿದರು.

























