ಪುತ್ತೂರು : ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಮನವಿಗೆ ಜನ ಸ್ಪಂದಿಸಿದ್ದಾರೆ.
ಪ್ರತಿ ಸ್ಪರ್ಧಿ ಪಕ್ಷಗಳ ಹಲವು ಆರೋಪಗಳ ನಡೆಯಿಂದ ಬೇಸತ್ತ ಅರುಣ್ ಕುಮಾರ್ ಪುತ್ತಿಲರು ಎ.28ರ ಮಹಿಳಾ ಸಮಾವೇಶ ಸೀತಾ ಪರಿವಾರದಲ್ಲಿ ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಅದಕ್ಕೆ ಅಧಿಕಾರ ಹಾಗೂ ಹಣ ಬಲ ಬೇಕು. ನಿಮ್ಮ ಓಟಿನ ಜೊತೆಗೆ 10 ರೂಪಾಯಿಯಂತೆ ನೀಡಿ ನಿಮ್ಮ ಮನೆ ಮಗನ ರೀತಿ ಬೆಂಬಲಿಸಿ ಎಂದು ಬೇಡಿಕೊಂಡಿದ್ದರು.

ಈ ವೀಡಿಯೋ ಭಾರೀ ವೈರಲ್ ಆಗಿತ್ತು. ಅಭಿಮಾನಿಗಳು ನಡುರಾತ್ರಿಯೂ ಕರೆ ಮಾಡಿ ಅಕೌಂಟ್ ನಂಬರ್ , ಕ್ಯೂ ಆರ್ ಕೋಡ್ ಕೇಳುತ್ತಿದ್ದರು.
ಪುತ್ತಿಲರ ಚುನಾವಣಾ ನಿರ್ವಹಣೆಯ ಐಟಿ ಸೆಲ್ ವತಿಯಿಂದ ಎ.29ರ ಮಧ್ಯಾಹ್ನ ಸಮಯ ಅಕೌಂಟ್ ನಂಬರ್ , ಕ್ಯೂ ಆರ್ ಕೋಡ್, ಯುಪಿಐ ನಂಬರ್ ನ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಪೋಸ್ಟರ್ ರೀಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ 1 ಲಕ್ಷದಷ್ಟು ಸಂಗ್ರಹ ಆಗಿದೆ. ಕುರಿಯದ ಬೆನ್ನುಮೂಲೆ ಮುರಿತಕ್ಕೊಳಕ್ಕಾದ ಸತೀಶ್ ಎನ್ನುವವರು 5 ಸಾವಿರ ಹಣ ಅರುಣ್ ಪುತ್ತಿಲರಿಗೆ ಹಾಕಿ ನಮಗೋಸ್ಕರ ದುಡಿಯುವವರು ಯಾವತ್ತೂ ಸೋಲಬಾರದು ಎನ್ನುವ ಸಂದೇಶ ಹಾಕಿದ್ದು, ಅಭಿಮಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯೋರ್ವರು 30000 ಹಣ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಮನೆ ಮನೆಯಿಂದ 10,50, 100, 500, 1000 ದಂತೆ ಹಣ ಸಂದಾಯವಾಗಿದೆ. ಹೊರ ತಾಲೂಕಿನವರೂ ಸ್ಪಂದಿಸಿದ್ದಾರೆ. 12 ಗಂಟೆ ಅವಧಿಯಲ್ಲಿ ಈ ಖಾತೆಗೆ 7.80 ಲಕ್ಷ ರೂಪಾಯಿ ಹಣ ಹರಿದು ಬಂದಿದೆ.
ಕ್ಷೇತ್ರದಾದ್ಯಂತ ಅರುಣ್ ಪುತ್ತಿಲರ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ..

























