ಪುತ್ತೂರು : ಹಿಂದುತ್ವ ಎಂದರೆ ಬಿಜೆಪಿ ಅದು ಪರಸ್ಪರ ವಿರೋಧವಾಗಲು ಸಾಧ್ಯವಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ರವರು ಹೇಳಿದರು.
ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಹಿಂದುತ್ವ vs ಬಿಜೆಪಿ ಆಗಲು ಸಾಧ್ಯವೇ ಇಲ್ಲ.., ಹಿಂದುತ್ವ ಯಾವಾಗಲು ಬಿಜೆಪಿ ಪರ ಇರ್ಬೇಕು., ಹಿಂದುತ್ವ ಬಿಜೆಪಿಯ ವಿರುದ್ಧವಾಗಿ ಹೋದರೆ ಅದು ನೈಜ ಹಿಂದುತ್ವ ಅಲ್ಲ.
ಯಾಕಂದ್ರೆ.., ದೇಶದಲ್ಲಿ ಹಿಂದುತ್ವದ ಪರ ನಿಲ್ಲುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದರು.
ಹಿಂದುತ್ವಕ್ಕೆ ರಾಷ್ಟ್ರೀಯ ತುಷ್ಟಿಕರಣ ನೀಡಿದಂತಹ ಪಕ್ಷ ಭಾರತೀಯ ಜನತಾ ಪಾರ್ಟಿ. ಅಯೋಧ್ಯೇಯ ರಾಮ ಮಂದಿರ ನಿರ್ಮಾಣ, ಗೋ ಹತ್ಯೆ ನಿಷೇಧ, ಆರ್ಟಿಕಲ್ 317 ರದ್ದು, ಮತಾಂತರ ಕಾಯ್ದೆ ಮೂಲಕ ಹಿಂದೂಗಳ ರಕ್ಷಣೆಗೆ ಮುಂದಾಗಿದ್ದು, ಹಾಗೆಯೇ ಅಲ್ಪಸಂಖ್ಯಾತರರಿಗೆ ತೊಂದರೆ ನೀಡುವುದಿಲ್ಲ ಅವರಿಗೂ ಕೆಲ ಕಾರ್ಯಕ್ರಮಗಳಿವೆ.. ಆದ್ರೇ ಹಿಂದುತ್ವಕ್ಕೆ ಗಟ್ಟಿ ನಿಲ್ಲುವ ಏಕೈಕ ಪಕ್ಷ ಬಿಜೆಪಿ. ಹಾಗಾಗಿ ಹಿಂದುತ್ವ ಹಾಗೂ ಬಿಜೆಪಿ ಪರಸ್ಪರ ವಿರುದ್ಧವಾಗಲು ಸಾಧ್ಯವಿಲ್ಲ ಎಂದರು..
ಪಕ್ಷೇತರವಾಗಿ ನಿಂತವರು ಯೋಚನೆ ಮಾಡಬೇಕು., ಪಕ್ಷದಿಂದ ಬೇಸರವಾದವರು ಯೋಚನೆ ಮಾಡಬೇಕು. ಪಕ್ಷವೇ ನಮಗೆಲ್ಲಾ.., ಪಕ್ಷ ಯಾವುದೋ ಒಂದು ನಿರ್ಧಾರ ತೆಗೆದುಕೊಂಡರು ಅದು ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿರುತ್ತದೆ. ಪಕ್ಷ ಎಲ್ಲರನ್ನೂ ಗಮನಿಸುತ್ತದೆ. ಸಾಮಾನ್ಯ ಕಾರ್ಯಕರ್ತನಿಗೂ ಸ್ಪಂದನೆ ನೀಡುವ ಪಕ್ಷ ಎಂದರೆ ಅದು ಬಿಜೆಪಿ ಎಂದರು.
ಪಕ್ಷೇತರ ನಿಂತವರು ನಮ್ಮ ಎದುರಾಳಿಗಳಲ್ಲ.., ಕಾಂಗ್ರೆಸ್ ನಮ್ಮ ನಿಜವಾದ ಎದುರಾಳಿ. ಕಾಂಗ್ರೆಸ್ ಬಂದ್ರೇ ದೇಶಕ್ಕೆ ಗಂಡಾಂತರ., ಹಾಗಾಗಿ ನಮ್ಮ ಎದುರಾಳಿ ಕಾಂಗ್ರೆಸ್ ಪಕ್ಷ ಎಂದರು.
























