ಪುತ್ತೂರು : ಬಿಜೆಪಿ ಹಾಗೂ ಆರ್.ಎಸ್.ಎಸ್. ಒಳಗೆ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷೇತರವಾಗಿ ನಿಂತಿರುವ ವಿದ್ಯಮಾನ ಬಿಜೆಪಿಯಲ್ಲಿದೆ. ಅದೇ ರೀತಿ ಕಾಂಗ್ರೆಸ್ ನಲ್ಲಿ ಆರ್.ಎಸ್.ಎಸ್. ಹಿನ್ನೆಲೆಯುಳ್ಳ ಅಭ್ಯರ್ಥಿಯನ್ನು ತಂದು ನಿಲ್ಲಿಸಿದ್ದಾರೆ ಎಂದು ಎಸ್.ಡಿ.ಪಿ.ಐ ರಾಜ್ಯ ಮಾಧ್ಯಮ ವಕ್ತಾರ ರಿಯಾಜ್ ಕಡಂಬು ಹೇಳಿದರು.
ಅವರು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಂತಹ ಶಾಫಿ ಬೆಳ್ಳಾರೆಯವರು ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿಯಾಗಿದ್ದು, ಸರ್ಕಾರದ ಕುತಂತ್ರದಿಂದಾಗಿ ಜೈಲು ಪಾಲಾಗಿರುತ್ತಾರೆ.

ಶಾಫಿ ಬೆಳ್ಳಾರೆ ಚುನಾವಣಾ ರಣರಂಗದಲ್ಲಿ ಫ್ಯಾಸಿಸ್ಟ್ ಸರಕಾರದ ಧೋರಣೆಯಿಂದಾಗಿ ಜೈಲಿನಲ್ಲಿದ್ದುಕೊಂಡು ಸ್ಪರ್ಧೆ ಮಾಡಲಿದ್ದಾರೆ. ಆದರೆ ಬಿಜೆಪಿ ಜನರ ನೈಜ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸದೆ ದಿನ ಬೆಳಗಾದರೆ ಕೋಮುವಾದ ಮಾಡಿ ಧರ್ಮಗಳ ನಡುವೆ ಕಂದಕ ಉಂಟು ಮಾಡುತ್ತಿದೆ. ಇದರ ಜೊತೆಗೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ನಮ್ಮಿಂದ ಮಾತ್ರ ಜಾತ್ಯಾತೀತತೆ ಉಳಿಸಲು ಸಾಧ್ಯ ಎಂದು ಹೇಳಿ ರಾಹುಲ್ ಗಾಂಧಿ ಭಾಷಣ ಮಾಡುತ್ತಾರೆ. ಆದರೆ ಪುತ್ತೂರಿನಲ್ಲಿ ಆರ್ ಎಸ್ ಎಸ್ ನ ಹಿನ್ನಲೆಯುಳ್ಳ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಯುವ ಕಾಂಗ್ರೆಸ್ ನ ಅಧ್ಯಕ್ಷ ಈ ಹಿಂದೆ ಫೇಸ್ಬುಕ್ ನಲ್ಲಿ ಹೇಳಿರುವ ಹಾಗೆ ಕಾಂಗ್ರೆಸ್ ನ ಉಪಾಧ್ಯಕ್ಷರಾದಂತಹ ಕನ್ಯಾನ ಕರೋಪಾಡಿಯ ಜಲೀಲ್ ಕೊಲೆ ಆರೋಪಿಗಳನ್ನು ರಕ್ಷಣೆ ಮಾಡಿದಂತಹ.., ಅರ್ಪಟ್ಮೆಂನ್ ನಲ್ಲಿ ಮುಸ್ಲಿಂ ಸಮುದಾಯದವರಿಗೆ ಅವಕಾಶವಿಲ್ಲ ಎಂದು ಬರೆದಿದ್ದಂತಹ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ಅನ್ನು ನೀಡಿದೆ.
ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಎಸ್ ಡಿ ಪಿ ಐ ಅನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ನಮ್ಮನ್ನು ಕೆಣಕಬೇಡಿ ಇದಕ್ಕೆ ಹೇಗೆ ಉತ್ತರಿಸಬೇಕೆಂದು ಎಸ್ ಡಿ ಪಿ ಐಗೆ ತಿಳಿದಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸಂಘಪರಿವಾರದ ವ್ಯಕ್ತಿ ಸ್ಪರ್ಧೆಯಲ್ಲಿದ್ದಾರೆ ಎಂದು ಹೇಳಿದ ಅವರು ಸತ್ಯ ಮತ್ತು ನ್ಯಾಯದ ಪರವಾಗಿರುವ ಎಸ್ ಡಿ ಪಿಐಗೆ ಮತ ನೀಡುವಂತೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಕ್ಷೇತ್ರ ಸಮಿತಿ ಸದಸ್ಯ ಇಬ್ರಾಹಿಂ ಹಾಜಿ ಸಾಗರ್, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮರ್ದ, ತಾಲೂಕು ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

























