ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಪ್ರಚಾರರ್ಥವಾಗಿ ಅಭಿಮಾನಿಗಳು ಬೃಹತ್ ಬಲೂನ್ ಅನ್ನು ಬಾನೆತ್ತರಕ್ಕೆ ಹಾರಿಸಿದ ಘಟನೆ ಪೋಳ್ಯದಲ್ಲಿ ನಡೆದಿದೆ.
ಪೋಳ್ಯದಲ್ಲಿ ಪುತ್ತಿಲ ಅಭಿಮಾನಿಗಳು ಪ್ರಚಾರರ್ಥವಾಗಿ ಬೃಹತ್ ಬಲೂನ್ ಅನ್ನು ಗಗನಕ್ಕೆ ಹಾರಿಸಿದ್ದಾರೆ.

‘ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಸತ್ಯ,ಧರ್ಮ, ನ್ಯಾಯ ನಿಷ್ಠೆಯ ಸಮರ್ಥ ಅಭ್ಯರ್ಥಿ’ ಎಂದು ಬಲೂನ್ ಮೇಲೆ ಬರೆದು ಅಭಿಮಾನಿ ಗಳು ಅದನ್ನು ಗಗನದತ್ತ ಹಾರಿಸಿದ್ದಾರೆ.

ಅಭಿಮಾನಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಪುತ್ತಿಲ ರವರು ಚುನಾವಣಾ ಕಣಕ್ಕೆ ಇಳಿದಿದ್ದು, ನೆಚ್ಚಿನ ನಾಯಕನ ವಿಜಯ ಪತಾಕೆಯು ಬಾನೆತ್ತರಕ್ಕೆ ಹಾರಬೇಕೆನ್ನುವ ಮಹದಾಸೆಯನ್ನಿಟ್ಟುಕೊಂಡು ಕಾರ್ಯಕರ್ತರು ಬಲೂನ್ ಅನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆನ್ನಲಾಗಿದೆ.























