ಪುತ್ತೂರು : ಹಲವು ವರುಷಗಳ ಹಿಂದೆ ನಡೆದ ಶನಿಪೂಜೆ ವೇಳೆಯ ಲಾಠಿಚಾರ್ಜ್, ಎನ್ಕೌಂಟರ್ ಯತ್ನದ ಪ್ರಶ್ನೆಗಳಿಗೆ ಹಲವು ವರುಷಗಳ ಬಳಿಕ ಮಹಾಲಿಂಗೇಶ್ವರ ದೇವರ ಪುಣ್ಯಭೂಮಿಯಲ್ಲಿ ಸತ್ಯ ಹೊರ ಬಂದಿದೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಈ ಬಗ್ಗೆ ಅವರು ಮಾತನಾಡಿದರು.
ಹಿಂದುತ್ವದ ಕೆಲಸ ಮಾಡುವಂತಹ ಕಾರ್ಯಕರ್ತರು ಬೀದಿ ಹೆಣವಾಗಬಾರದು ಎನ್ನುವಂತಹ ಒಂದೇ ಒಂದು ಯೋಚನೆ ನಡುವೆ., ಈ ಬಾರಿ ಚುನಾವಣೆ ಕಣಕ್ಕಿಳಿದಿದ್ದೇನೆ.
ಸಾಕಷ್ಟು ಹಿಂದಿನ ವಿಚಾರಗಳನ್ನು ಉಲ್ಲೇಖ ಮಾಡಿದ್ರು., ಶನಿಪೂಜೆಯ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಆಗಿರುವಂತಹ ಬೆಳವಣಿಗೆ ಯಕ್ಷಪ್ರಶ್ನೆಯಾಗಿ ಉಳಿದಿರುವ ಘಟನೆಯನ್ನು ಮಾಡಿದವರು ಯಾರು..!!?? ಆ ಸಂದರ್ಭದಲ್ಲಿ ಎನ್ಕೌಂಟರ್ ಮಾಡಲು ಆದೇಶಿಸಿದವರು ಯಾರು..!?? ಅನ್ನುವಂತಹ ಸಾಕಷ್ಟು ಗೊಂದಲಗಳಿತ್ತು, ಆದರೆ ಆ ಎಲ್ಲಾ ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ ಎಂದರು.
ನ್ಯಾಯ ಸಿಗುವಾಗ ಒಂದಷ್ಟು ವರ್ಷಗಳು ಕಳೆಯಿತು. ಆದರೇ ಮಹಾಲಿಂಗೇಶ್ವರ ದೇವರ ಪುಣ್ಯ ಭೂಮಿಯಲ್ಲಿ ಯಾವತ್ತೂ ಕೂಡ ಪುಣ್ಯ ಉಳಿಯುತ್ತೆ.., ಕೇಸರಿ ಧ್ವಜ ಅರಳುತ್ತೆ ಎನ್ನುವುದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಸಿಕ್ಕಿರುವಂತಹ ಸಹಕಾರವೇ ಸಾಕ್ಷಿ ಎಂದು ಅವರು ಹೇಳಿದರು.
























