‘ಪುತ್ತೂರಿಗೆ ಪುತ್ತಿಲ’ ಸದ್ಯ ಟ್ರೆಂಡ್ ಸೃಷ್ಟಿ ಮಾಡಿರೋ ವಿಚಾರ. ಪುತ್ತೂರು ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಈ ವಿಚಾರ ಭಾರೀ ಸದ್ದು ಮಾಡುತ್ತಿದ್ದು.., ಪುತ್ತೂರಿನಲ್ಲಿರುವ ‘ಅರುಣ್ ಕುಮಾರ್ ಪುತ್ತಿಲ’ ಅಭಿಮಾನಿಯೊಬ್ಬರು ತಮ್ಮ ವಿವಾಹ ನಿಶ್ಚಿತಾರ್ಥದಲ್ಲಿ ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದು, ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಬೆದ್ರಾಳ ನಿವಾಸಿ ಗಣೇಶ್ ಗೌಡ ಹಾಗೂ ಚೈತ್ರಾ ರವರು ಇಂದು ತಮ್ಮ ವಿವಾಹ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು, ಆದ್ರೇ ವಿಭಿನ್ನ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸೃಷ್ಟಿ ಮಾಡಿದ್ದಾರೆ.

‘ಗಣೇಶ್ ಮತ್ತು ಚೈತ್ರಾ’ ಇಬ್ಬರು ‘ಪುತ್ತೂರಿಗೆ ಪುತ್ತಿಲ’ ಎಂದು ಬರೆದ ಬ್ಯಾಟ್ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದು, ‘ಈ ಸಲ ಪುತ್ತಿಲ’ ಎಂದು ಬರೆದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ತಮ್ಮ ನೆಚ್ಚಿನ ನಾಯಕನ ಮೇಲಿರುವ ಅಭಿಮಾನವನ್ನು ಈ ರೀತಿಯಾಗಿಯೂ ತೋರಿಸಿಕೊಳ್ಳಬಹುದು.., ಹಾಗೆಯೇ ತಮ್ಮ ನೆಚ್ಚಿನ ನಾಯಕನಿಗೆ ಈ ರೀತಿಯೂ ಸಪೋರ್ಟ್ ಮಾಡಬಹುದೆಂಬುದನ್ನು ಈ ಜೋಡಿ ತೋರಿಸಿಕೊಟ್ಟಿದ್ದಾರೆ.
























