ಪುತ್ತೂರು : ಪಕ್ಷೇತರ ಅಭ್ಯರ್ಥಿ ಪರ ಮತದಾರರಿದ್ದಾರೆ ಎನ್ನುವ ಯೋಚನೆಗೋಸ್ಕರ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ಯತ್ನ, ಪ್ರಚಾರದ ವಾಹನಗಳನ್ನು ನಿಲ್ಲಿಸುವಂತಹ ಪ್ರಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಕಾರ್ಯಕರ್ತರು ಸಂಯಮದಿಂದ ಇರಬೇಕು ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ತಿಳಿಸಿದ್ದಾರೆ.
‘ರಾಷ್ಟ್ರೀಯ ಪಕ್ಷಗಳು ಪಕ್ಷೇತರ ಅಭ್ಯರ್ಥಿಯ ವಿರುದ್ಧವಾಗಿ ಕೆಲಸ ನಿರ್ವಹಿಸುತ್ತಿದೆ. ತಂತ್ರಗಾರಿಕೆಯನ್ನು ನಡೆಸುತ್ತಿದೆ. ಮೇ.10 ರಂದು ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಕಾರ್ಯಕರ್ತರು ಯಾವುದೇ ಗೊಂದಲಗಳನ್ನು ಮಾಡದೆ ಸಮಾಧಾನದಿಂದಿರಬೇಕು.
ಅವರು ಮಾಡುವಂತಹ ವಿರೋಧದ ಕೆಲಸಗಳಿಗೆ ಸ್ಪಂದನೆ ನೀಡದೆ., ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾರ್ಯಕರ್ತರು ಸಂಯಮದಿಂದಿರಬೇಕು ಎಂದು ಅವರು ತಿಳಿಸಿದರು.























