ಪುತ್ತೂರು : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದ್ದು, ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ದೇವಸ್ಥಾನದ ಬಳಿಯಿಂದ ರೋಡ್ ಶೋ ಆರಂಭಗೊಳಿಸಿದರು.

ಮೊಟ್ಟೆತ್ತಡ್ಕ ಹೆಲಿಪ್ಯಾಡ್ ನಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯೋಗಿ ಆದಿತ್ಯನಾಥ್ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.


ದೇವಳದ ಬಳಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಯೋಗಿ ನೋಡಲು ಜನ ಸಲು ಗಟ್ಟಿ ನಿಂತಿದ್ದು, ಯೋಗಿ ಜನತೆಯತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ.









































