ಪುತ್ತೂರು : ತನ್ನ ವಿರುದ್ಧ ಮಾನಹಾನಿಕರ ವೀಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಮಂಗಳೂರು ಪೂರ್ವ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಶಿವಶಂಕರ್ ಶೆಟ್ಟಿ ಮತ್ತು ವಿಜೆ ಅಜಯ್ ಅಂಚನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾನಹಾನಿಕರ ವರದಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿ 25 ಲ.ರೂ. ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣಕ್ಕೆ ಯೂಟ್ಯೂಬ್ನಲ್ಲಿ ಮಾನಹಾನಿಕರ ವೀಡಿಯೋ ಪ್ರಸಾರ ಮಾಡಿ ಬೇಡಿಕೆ ಈಡೇರಿಸದಿದ್ದಲ್ಲಿ ಇನ್ನಷ್ಟು ವೀಡಿಯೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಎ.28 ರಂದು ವಿಜೆ ಅಜಯ್ ಅಂಚನ್ ಮಾಲಕತ್ವದ ಯೂಟ್ಯೂಬ್ ಚಾನೆಲ್ನಲ್ಲಿ ಒಂದು ವೀಡಿಯೋವನ್ನು ಹರಿಯಬಿಟ್ಟಿದ್ದು ಈ ವೀಡಿಯೋದಲ್ಲಿ ಅಜಯ್ ಅಂಚನ್, ಶಿವಶಂಕರ್ ಶೆಟ್ಟಿ ಅವರನ್ನು ಸಂದರ್ಶಿಸುವ ರೀತಿಯಲ್ಲಿ ತೋರಿಸಲಾಗಿದೆ. ಅದರಲ್ಲಿ ಅಶೋಕ್ ರೈ ಜನರಿಗೆ ಮೋಸ ಮಾಡಿದ್ದಾರೆ ಎಂಬುದಾಗಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಅಶೋಕ್ ರೈ ರವರು ದೂರು ನೀಡಿದ್ದರು.
ಈ ಬಗ್ಗೆ ಐಪಿಸಿ 1860 (U/s-384,385,507,34); REPRESENTATION OF PEOPLE ACT,1951 & 1988 (U/s-171(E),171(F) ರಂತೆ ಪ್ರಕರಣ ದಾಖಲಾಗಿದೆ.




























