ವಿಧಾನಸಭಾ ಚುನಾವಣೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಪುತ್ತೂರಿನಲ್ಲಿ ಈ ಸಲ ಭಾರೀ ಪೈಪೋಟಿ ಇದ್ದು, ಯಾರು ಗೆಲುವನ್ನ ಸಾಧಿಸಲಿದ್ದಾರೆ ಎಂಬ ಕುತೂಹಲ ಜನರಲ್ಲಿದೆ. ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರ ಅಭಿಮಾನಿಗಳು ವಿಭಿನ್ನವಾಗಿ ಮತಪ್ರಚಾರ ಮಾಡುತ್ತಿದ್ದಾರೆ.

ಪುತ್ತಿಲ ಅಭಿಮಾನಿ ಬಳಗದ ಒಂದು ತಂಡ ಮದುವೆ ಸಮಾರಂಭಕ್ಕೆ ಹೋಗಿ ಅಲ್ಲಿ ವಿಭಿನ್ನವಾಗಿ ನವಜೋಡಿಗೆ ಉಡುಗೊರೆ ನೀಡಿ ಶುಭಹಾರೈಸಿದ್ದಾರೆ.

‘ಪುತ್ತಿಲ ಹಾಗೂ ಬ್ಯಾಟ್’ ಚಿಹ್ನೆ ಇರುವ ಫೋಟೋ ಗಿಫ್ಟ್ ನೀಡಿ ಗಮನ ಸೆಳೆದಿದ್ದಾರೆ.
ಪುತ್ತೂರು ತಾಲೂಕಿನ ಬೊಳುವಾರು ವಿಶ್ವಕರ್ಮ ಹಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಶಶಿ ಸಂಪ್ಯ ಹಾಗೂ ತಂಡದವರು ಈ ವಿಭಿನ್ನ ಉಡುಗೊರೆ ನೀಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..




























