ವಿಟ್ಲ: ಪುತ್ತೂರು 206 ಕ್ಷೇತ್ರ ವ್ಯಾಪ್ತಿಯ ಮೇಗಿನಪೇಟೆ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ಮುಂದೆ ಕಾಂಗ್ರೆಸ್ ಜೊತೆಗೆ ಒಪ್ಪಂದಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಮಾಡಿದ್ದು ಮಾತಿನ ಚಮಕಿಗೆ ಕಾರಣವಾಗಿದೆ.
ವಿಟ್ಲ ಮೇಗಿನಪೇಟೆ ಮತಗಟ್ಟೆಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ ಸಂದರ್ಭದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದರು. ನೀವಿಬ್ಬರೂ ಒಂದೆಯೇ ಒಟ್ಟೋಟ್ಟಾಗಿ ಬರುತ್ತಿದ್ದೀರಿ.!!? ನಿಮ್ಮೊಳಗಡೆ ಹೊಂದಾಣಿಕೆಯೇ ಎಂದು ಬಿಜೆಪಿಯ ಕೃಷ್ಣ ಮುದೂರು ಅರುಣ್ ಪುತ್ತಿಲ ಬೆಂಬಲಿಗರಾದ ಅನಂತ್ ಪ್ರಸಾದ್ ಬಳಿ ಪ್ರಶ್ನಿಸಿದ್ದು, ಈ ಸಂದರ್ಭ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಕೃಷ್ಣ ಮುದೂರು ಬಳಿ ಬಂದು ಮಾತನಾಡಿದ ಅರುಣ್ ಪುತ್ತಿಲ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದನ್ನು ಮಹಾಲಿಂಗೇಶ್ವರನ ಮುಂದೆ ಬಂದು ಹೇಳಿ ಎಂದು ಹೇಳಿದ್ದು, ಈ ವೇಳೆ ಕೃಷ್ಣ ಮುದೂರು ನಾನು ಯಾವ ವಿಚಾರಕ್ಕೂ ಇಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.


























