ಮಂಗಳೂರು : ಕ್ಷೇತ್ರದ ಜನ ಅಭೂತಪೂರ್ವವಾದಂತಹ ಗೆಲುವನ್ನು ನೀಡಿದ್ದಾರೆ. ಮತದಾರರಿಗೆ ಹಾಗೂ ಪರಿಶ್ರಮ ಪಟ್ಟು ಕೆಲಸ ಮಾಡಿದಂತಹ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ರವರು ಹೇಳಿದರು.
ಸುಳ್ಳು ಭರವಸೆಗಳನ್ನು ಜನ ನಂಬುವ ರೀತಿಯಲ್ಲಿ ಕಾಂಗ್ರೆಸ್ ರಾಜ್ಯದ ಮುಂದೆ ಇಟ್ಟಿದೆ. ಇದು ಸುಳ್ಳು ಭರವಸೆ ಎಂದು ಮುಂದಿನ ದಿನಗಳಲ್ಲಿ ರಾಜ್ಯದ ಮತದಾರರಿಗೆ ತಿಳಿಯಲಿದೆ. ಈ ವೇಳೆ ಕಾಂಗ್ರೆಸ್ ಇದಕ್ಕೆ ತಕ್ಕ ಬೆಲೆ ತೆರಲಿದೆ.
ಮತದಾರರು, ಅಭಿವೃದ್ಧಿಯ ಕೆಲಸಗಳು ಹಾಗೂ ಜನರ ಜೊತೆ ಅವರ ಕಷ್ಟ-ಸುಖಕ್ಕೆ ನಿಂತ ಕಾರಣ ಈ ಅಭೂತ ಪೂರ್ವ ಗೆಲುವು ಲಭಿಸಿದೆ.
ಸಮ್ಮಿಶ್ರ ಸರಕಾರದ ವೇಳೆಯೂ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿಯೂ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ಖಂಡಿತಾ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು..

























