ಪುತ್ತೂರು : ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೋವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಯುವಕರನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ಥಳಿಸಿ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಪ್ರತಿಕ್ರಿಯಿಸಿದ್ದು, ‘ರಾಜ್ಯ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಕೆಲಸವಿದು’ ಎಂದು ಹೇಳಿದ್ದಾರೆ.
‘ಬ್ಯಾನರ್ ಮೇಲೆ ಚಪ್ಪಲಿ ಹಾರ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರನ್ನು ತಂದು ಅವರ ವಿರುದ್ಧ ಅಮಾನುಷವಾಗಿ ಪೊಲೀಸ್ ಇಲಾಖೆ ನಡೆದುಕೊಂಡಿದೆ.
ಈ ವಿಚಾರವನ್ನು ನಾನು ಫೇಸ್ಬುಕ್ ನಲ್ಲಿ ನೋಡಿದ್ದು, ನೋಡುವುದಕ್ಕೂ ಮೊದಲು ಹೊರ ದೇಶಗಳಿಂದ ಕರೆ ಮಾಡಿ ನಿಮ್ಮ ಪುತ್ತೂರಿನ ಪೊಲೀಸರು ಈ ರೀತಿ ಅಮಾನುಷವಾಗಿ ವರ್ತಿಸಿದಾಗಲು ಕೇಳುವವರು ಇಲ್ಲವಾ ಎಂದು ಹಲವರು ಕೇಳಿದ್ರು., ಈ ವೇಳೆ ಸ್ವತಃ ಡಿವೈಎಸ್ಪಿ ಅವರನ್ನೇ ಸಂಪರ್ಕಿಸಿದೆ. ನೀವು ಮಾಡಿದ ಈ ಕೆಲಸ ಬಹಳ ದೊಡ್ಡ ತಪ್ಪು.
ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ್ದು, ಖಂಡಿತಾ ತಪ್ಪು., ಆದ್ರೇ ಚಪ್ಪಲಿ ಹಾರ ಹಾಕಿದ್ದ ತಕ್ಷಣ ಅವರು ಚಿಕ್ಕವರು ಆಗುವುದಿಲ್ಲ., ಹೂವಿನ ಹಾರ ಹಾಕಿದ ತಕ್ಷಣ ದೊಡ್ಡ ಜನವು ಆಗುವುದಿಲ್ಲ.., ಆದ್ರೇ ಅವಮಾನ ಮಾಡಿದ್ದಕ್ಕೆ ಅವರ ಮೇಲೆ ಕ್ರಮಕೈಗೊಳ್ಳಬೇಕಾದ್ದು ಖಂಡಿತಾ ಅಗತ್ಯ ಇತ್ತು., ಕೇಸು ಹಾಕಿ ಕೋರ್ಟಿಗೆ ಕುಣಿಯುವ ಹಾಗೆ ಮಾಡಿದ್ರೆ.., 4,5 ವರ್ಷದ ನಂತರದ ಅವರು ಸರಿ ದಾರಿಗೆ ಬರ್ತಾರೆ. ಇನ್ನು ಅತಿಯಾಗಿ, ಅಮಾನುಷವಾಗಿ, ಕ್ರೂರವಾಗಿ ಹೊಡೆದದ್ದು ಕರ್ನಾಟಕ ಪೊಲೀಸರು ತಲೆ ತಗ್ಗಿಸುವ ಕೆಲಸ ಆಗಿದೆ ನಿಮ್ಮಿಂದ ಅಂತ ಅಧಿಕಾರಿಯಲ್ಲಿ ಹೇಳಿದೆ.
ಹೆಣ್ಣುಮಕ್ಕಳಿಗೆ ಅತ್ಯಾಚಾರವಾದ ವೇಳೆ ಅಥವಾ ಹೆಣ್ಣುಮಕ್ಕಳಿಗೆ ದೌರ್ಜನ್ಯ ನಡೆದಾಗ ಕೇಸು ಆದ ವೇಳೆ ಎಲ್ಲೂ ಈ ತರ ಹೊಡೆದದ್ದು ಕಂಡು ಬರ್ತಿಲ್ಲ.., ಅಂತದ್ರಲ್ಲಿ ಇವ್ರು ಏಕಾ-ಏಕಿ ತಂದು ಹೊಡೆದಿದ್ದಾರೆ ಹೇಳಿದ್ರೆ ಯಾವುದಾ ಒತ್ತಡಕ್ಕೆ ಅಂತಾ ಕೇಳಿದ್ರೆ ಅಲ್ಲ ಅಂತ ಹೇಳ್ತಾರೆ.., ಒತ್ತಡ ಇದ್ರು ಇಲ್ಲದಿದ್ರು.., ಯಾರ ಒತ್ತಡ ಅದು ಬೇಕು.., ಒತ್ತಡ ಅಲ್ಲ ಹೇಳಿದ್ರು, ಒತ್ತಡ ಬಿಜೆಪಿಯವರಿಂದ ಇದ್ದಿರಬಹುದು, ಬಿಜೆಪಿಯಿಂದ ಒತ್ತಡ ಇದ್ರು ಸರಕಾರ ಇರುವುದು ಬಿಜೆಪಿಯಲ್ಲ, ಹಾಗಿದ್ದಲ್ಲಿ ಒತ್ತಡ ಹೇರುವವರು ಯಾರು..!?? ಕಡೆಗೆ ಯಾರೋ ಪಾಪದ ಅಧಿಕಾರಿಗಳ ತಲೆಗೆ ಹಾಕಿ ಅವರನ್ನು ಅಮಾನತು ಮಾಡುವ ಕೆಲಸ ನಡೆಯುತ್ತೆ. ಬೇರೆಯವರೆಲ್ಲಾ ಆರಾಮವಾಗಿ ಇರುತ್ತಾರೆ. ಇದು ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ವಿರುದ್ಧ ಕ್ರಮಕೈಗೊಳ್ಳಬೇಕು.
ಯಾರೋ ಒಬ್ಬ ಬಡಪಾಯಿ ಸಿಕ್ಕಿದ ಅಂತ ಹೇಳಿ.., ನನ್ನ ಪಕ್ಷ ಅಲ್ಲ ಅಂತ ಹೇಳಿ ಅವರ ಮೇಲೆ ದೌರ್ಜನ್ಯ ಮಾಡುವುದು ಖಂಡಿತಾ ತಪ್ಪು. ಹಾಗೇ ಅಂತ ಸಾರ್ವಜನಿಕವಾಗಿ ಒಬ್ಬರ ಬಗ್ಗೆ ಕೆಟ್ಟದಾಗಿ ಬ್ಯಾನರ್ ಹಾಕಿ ಹಾರ ಹಾಕುವುದು ತಪ್ಪು. ಆದ್ರೇ ಅದಕ್ಕೆ ಬೇಕಾದಂತಹ ಶಿಕ್ಷೆಯನ್ನು ನೀಡಬೇಕೆ ವಿನಃ ಅತೀ ಅಮಾನುಷವಾಗಿ ನಡೆದುಕೊಂಡದ್ದು ಪೊಲೀಸರ ವೈಫಲ್ಯ., ಕರ್ನಾಟಕ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಹ ವಿಚಾರ ಇದು. ಯಾವುದೋ ಅತ್ಯಾಚಾರಿಗೆ ಹೀಗೆ ಮಾಡಿದ್ರೆ ಒಳ್ಳೆದಾಯಿತು ಅಂತ ಹೇಳ್ಬಹುದಿತ್ತು. ಆದ್ರೇ ಸಾಮಾನ್ಯ ಕಾರ್ಯಕರ್ತರನ್ನು ತಂದು ಹಿಂಸೆ ನೀಡುವುದು ಅಮಾನವೀಯ. ನಿಜವಾಗಿಯೂ ಅವರು ಹಾಕಿದ್ದಾರ ಇಲ್ಲವಾ.., ಪೊಲೀಸರು ಒತ್ತಡಕ್ಕೆ ಮಣಿದು ಯಾರನ್ನಾದರೂ ತಂದು ಹಾಕಿದ್ದಾರಾ.., ಎಂಬ ಬಗ್ಗೆ ಗೊತ್ತಿಲ್ಲ., ಆದ್ರೆ ಈ ರೀತಿ ವರ್ತಿಸುವುದು ಖಂಡನೀಯ ಎಂದು ಅವರು ಹೇಳಿದರು.

























