ಬೆಳ್ಳಾರೆ : ತ೦ದೆ – ಮಗನ ಹೊಡೆದಾಟದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಮೃತಪಟ್ಟ ಘಟನೆ ನಡೆದಿದೆ.
ಕುಕ್ಕುಜಡ್ಕದಲ್ಲಿ ಕಳೆದ ಒಂದು ವಾರದ ಹಿಂದೆ ಘಟನೆ ನಡೆದಿದ್ದು, ಕಿಟ್ಟು ಹಾಗೂ ಮಗ ಹರ್ಷಿತ್ ಹೊಡೆದಾಟ ನಡೆಸಿಕೊಂಡಿದ್ದರು.
ಹಳೆಯ ದ್ವೇಷದ ಕಾರಣದಿಂದ ಕಿಟ್ಟು ರವರ ಮೊದಲನೆ ಹೆ೦ಡತಿಯ ಮಗ ಹರ್ಷಿತ್ ಎಂಬಾತ ಮನೆಗೆ ಬ೦ದು ಅಡಿಕೆ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ. ಗಾಯಗೊಂಡಿದ್ದ ಕಿಟ್ಟು ರವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಠಾಣೆಗೆ ನಿತ್ಯಾನ೦ದ ರವರು ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

























