ವಿಟ್ಲ : ಹಿಂದೂ ಸಂಘಟನೆ ಮುಖಂಡರೋರ್ವರು ನಿಧನರಾದ ಘಟನೆ ವಿಟ್ಲದಲ್ಲಿ ನಡೆದಿದೆ.
ಮೃತರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ, ವೀರಕಂಭ ಮಜಿ ನಿವಾಸಿ ಜಯಶಂಕರ್ (40) ಎಂದು ಗುರುತಿಸಲಾಗಿದೆ.

ಜಯಶಂಕರ್ ರವರು ಕೃಷಿಕರಾಗಿದ್ದು, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಅಪಘಾತವಾಗಿದ್ದು, ತದನಂತರ ಮಲಗಿದಲ್ಲಿಯೇ ಇದ್ದರು. ಇಂದು ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


























