ಬಂಟ್ವಾಳ : ಸಂಸ್ಕಾರ ಭಾರತೀ ದ.ಕ.ಜಿಲ್ಲೆ ಬಂಟ್ವಾಳ ತಾಲೂಕು ಘಟಕ, ಶ್ರೀ ಸ್ಕಂದ ಬಾಲ ಕಲಾ ವೃಂದ ಅಳಿಕೆ ಸಂಯುಕ್ತಾಶ್ರಯದಲ್ಲಿ ಅಳಿಕೆ ಯುವಕಮಂಡಲ (ರಿ.), ನವಚೇತನ ಯುವತಿ ಮಂಡಲ (ರಿ.) ,ಯಕ್ಷ ಪೋಷಕರು ಅಳಿಕೆ ಸಹಯೋಗದೊಂದಿಗೆ ಅಳಿಕೆ ಯುವಕ ಮಂಡಲದ ಸಭಾಭವನದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲಾದ್ಯಕ್ಷ ಟಿ. ತಾರಾನಾಥ ಕೊಟ್ಟಾರಿ ಯವರಿಂದ ಉದ್ಘಾಟನೆಗೊಂಡ ಸಮಸ್ಕಾರ ಸೌರಭ ಮಕ್ಕಳ ರಜಾಹಬ್ಬದ ನಾಲ್ಕು ದಿನ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭ ಅಭೂತ ಪೂರ್ವವಾಗಿ ನಡೆಯಿತು.

ಕಾರ್ಯಕ್ರಮದ ಅಭ್ಯಾಗತರಗಿ ಆಗಮಿಸಿದ ಪುತ್ತೂರಿನ ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯಗಳು ಮಕ್ಕಳ ಪೋಷಕರಿಂದ ನಿರಂತರ ನಡೆಯುವಂತಾದಾಗ ಮಕ್ಕಳು ಸುಸಂಸ್ಕೃತರಾಗುತ್ತಾರೆ. ದೇಶ ಸಧೃಡವಾಗುತ್ತದೆ. ಈ ಕಾರ್ಯಕ್ರಮಗಳು ದೇಶವ್ಯಾಪಿಯಾಗಿ ಅನುಷ್ಠಾನವಾಗಬೇಕು ಆಗ ಅಖಂಡಭಾರತದ ಪರಿಕಲ್ಪನೆ ಸಾಕಾರವಾಗುತ್ತದೆ ಇಂತಹ ಸತ್ಕಾರ್ಯಗಳಲ್ಲಿ ನಿಮ್ಮಗಳ ಜೊತೆಯಲ್ಲಿ ನಾನು ಕೂಡಾ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಅಳಿಕೆ ವಿದ್ಯಾಸಂಸ್ಥೆಯ ನಿವೃತ ಪ್ರಾಧ್ಯಾಪಕರುಗಳಾದ ಶ್ರೀಧರ್ ಅಳಿಕೆ, ಪೂವಪ್ಪ ಶೆಟ್ಟಿ ಯವರು ಹಿತವಚನಗಳನ್ನು ನುಡಿದು ಶುಭಕೋರಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ಕಿಗಳಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಕೆ.ಅರ್ಟ್ಸ್ ನ ರಾಜೇಶ್ ವಿಟ್ಲ,ಶಿಕ್ಷಕಿ ನಳಿನಿ ಆಚಾರ್ಯ ಮಾಣಿಲ, ಅಧ್ಯಾಪಕರಾದ ಸಂಜೀವ ಮಿತ್ತಳಿಕೆ ನವಚೇತನ ಯುವತಿ ಮಂಡಲದ ಅಧ್ಯಕ್ಷೆ ಅಮೀತ ಸಂಜೀವ, ಸ್ಕಂದಬಾಲ ಕಲಾವೃಂದದ ನಿರ್ವಾಹಕಿ ಲೀಲಾವತಿ ರಾಮ ಗೌಡ,ಸಮಾಜ ಸೇವಾ ಕಾರ್ಯಕರ್ತ ಬಾಲ ಕೃಷ್ಣಪೂಜಾರಿ ಸಣ್ಣಗುತ್ತು, ಭಗವತೀ ಬ್ಯಾಂಕ್ ನಿರ್ದೇಶಕ ರಾಜೇಶ್ ಕರವೀರ, ಸಂಸ್ಕಾರ ಸೌರಭ ಕಾರ್ಯಕ್ರಮಗಳ ನಿರ್ವಾಹಕಿ ರಜನೀ ಹರೀಶ್ ಶೆಟ್ಟಿ, ಸ್ಥಳಿಯರಾದ ಆನಂದ ಆಚಾರ್ಯ ಉಪಸ್ಥಿತರಿದ್ದರು.

ಆಶಯಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ಪಡೆದ ಸದ್ವಿಚಾರಗಳ ಅನಾವರಣ ಶಿಬಿರಾರ್ಥಿಗಳಿಂದ ಮೂಡಿ ಬಂದಿತು. ಶಿಬಿರದಲ್ಲಿ ಭಾಗವಹಿಸಿದ್ದ ಒಂದರಿಂದ ಒಂಬತ್ತನೇ ತರಗತಿ ವರೆಗಿನ 58 ಮಕ್ಕಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು ಮಾತೃಪೂಜನಾ ,ಸಹಭೋಜದೊಂದಿಗೆ ಕಾರ್ಯಕ್ರಮ ಸಮಪನ್ನಗೊಂಡಿತು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಭಾವುಕರಾದರು.
ಲೀಲಾವತಿ ರಾಮ ಗೌಡ ಸ್ವಾಗತಿಸಿ,ಅಮೀತ ಸಂಜೀವ ಧನ್ಯವಾದವಿತ್ತರು. ಶ್ರೀ ಸ್ಕಂದಬಾಲ ಕಲಾವೃಂದದ ಸಂಚಾಲಕ ಸಂಸ್ಕಾರಭಾರತೀ ಅಳಿಕೆಯ ಸಂಯೋಜಕ ಸದಾಶಿವ ಅಳಿಕೆ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಯಲಕ್ಷ್ಮಿ, ಕಾವ್ಯಶ್ರೀ, ಅರವಿಂದ ಆಚಾರ್ಯ ಮಾಣಿಲ, ನಳಿನಿ ಆಚಾರ್ಯ ಮಾಣಿಲ, ಸಂಜೀವ ಮಿತ್ತಳಿಕೆ., ಕರಾಟೆಗುರುಗಳಾದ ಮಾಧವ ಸಿಂಹಮೂಲೆಯವರ ಶಿಷ್ಯರಾದ ರೋಹಿತ್ ದಿಲೀಪ್ ರವರು ತರಬೇತಿ ನೀಡಿದ್ದರು. ಗಣ್ಯಶ್ರೀ, ಸಿಂಚನ, ಪಯಸ್ವಿನಿ, ಮೋನಿಷ್ ,ಶಿಕ್ಷಕಿ ಕವಿತಾ ಸಹಕರಿಸಿದರು.

























