ಭಾರತ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅಗ್ನಿಪಥದ ಅಡಿಯಲ್ಲಿ 2023ರ ಸಾಲಿನಲ್ಲಿ ಭಾರತೀಯ ಭೂಸೇನೆಯು ಅರ್ಜಿಗಳನ್ನು ಆಹ್ವಾನಿಸಿ ಲಿಖಿತ ಪರೀಕ್ಷೆಯನ್ನು ಕಳೆದ ಎಪ್ರಿಲ್ ತಿಂಗಳಿನಲ್ಲಿ ನಡೆಸಿತ್ತು. ಇದೀಗ ಲಿಖಿತ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಅಂತಿಮ ಹಂತದ ದೈಹಿಕ ಕ್ಷಮತೆ ಮತ್ತು ವೈದ್ಯಕೀಯ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ನೇಮಕಾತಿಯಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಮತ್ತು ಮಾರ್ಗದರ್ಶನ ಪಡೆದುಕೊಂಡಿರುವ 7 ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯು 2023 ನೇ ಈ ಸಾಲಿನ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ದೈಹಿಕ ಕ್ಷಮತೆಯ ತರಬೇತಿಯನ್ನು ನೀಡುವುದಾಗಿ ಪ್ರಕಟಣೆಯ ಮೂಲಕ ತಿಳಿಸಲಾಗಿದೆ
ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಯಾದ ವಿದ್ಯಾರ್ಥಿಗಳು :-
ವಿಖ್ಯಾತ್ ಡಿ ಶೆಟ್ಟಿ,ಸೃಜನ್ ರೈ, ಸಾಕೆತ್ ರಾಮ್ ಎ, ಮದನ್, ಮಿಥುನ್, ನಿತಿನ್ ಕುಮಾರ್, ಭವಿಷ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :ವಿದ್ಯಾಮಾತಾ ಅಕಾಡೆಮಿ
ಹಿಂದುಸ್ತಾನ್ ಕಾಂಪ್ಲೆಕ್ಸ್ , ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201
ಫೋನ್ ನಂ. 9148935808/ 9620468869


























