ಬಂಟ್ವಾಳ : ಕೊರೋನಾ ಸಂದರ್ಭದಲ್ಲಿ ನಿರಂತರ ಆಂಬ್ಯುಲೆನ್ಸ್ ಡ್ರೈವರ್ ಆಗಿ ಎಷ್ಟೋ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಹಾಗೂ ಶವ ಸಂಸ್ಕಾರ ಮಾಡುವ ಸೇವೆಯಲ್ಲಿ ಸಹಕರಿಸಿದ ವಿಶ್ವ ಹಿಂದೂ ಪರಿಷದ್ ಭಜರಂಗದಳದ ಸಕ್ರಿಯ ಕಾರ್ಯಕರ್ತ ನಿತಿನ್ ಪೂಜಾರಿ ಸರಪಾಡಿಯವರು ಮೇ.14 ರಂದು ನಿಧನರಾಗಿದ್ದು, ಹಿಂದೂ ಟೂರಿಸ್ಟ್ ಅಸೋಸಿಯೇಶನ್ ನ ಚಾಲಕ-ಮಾಲಕರು ಸೇರಿ ಸಂಗ್ರಹಿಸಿದ 1 ಲಕ್ಷ ರೂ. ಅನ್ನು ನಿತಿನ್ ತಾಯಿಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೀಡಿದರು.

ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹಿಂದೂ ಟೂರಿಸ್ಟ್ ಅಸೋಸಿಯೇಶನ್ ನ ಪ್ರಮುಖರು ಉಪಸ್ಥಿತರಿದ್ದರು.





























