ಪುತ್ತೂರು : ಮಿನಿ ವಿಧಾನ ಸೌಧದ ಶಾಸಕರ ಕೊಠಡಿಯನ್ನು ಬದಲಾಯಿಸಲು ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕಚೇರಿ ಮಾಡಿದ್ದ ಕೊಠಡಿಯನ್ನು ನೂತನ ಶಾಸಕರಾದ ಅಶೋಕ್ ರೈ ಬದಲಾಯಿಸಿದ್ದಾರೆ.

ಕಚೇರಿಯಲ್ಲಿ ವಾಸ್ತು ದೋಷವೋ ಏನೋ ಗೊತ್ತಿಲ್ಲ. ಈ ಕಚೇರಿ ಚಿಕ್ಕದಾಗಿದ್ದು, ಸ್ಥಳವಕಾಶದ ಕೊರತೆ ಇದೆ. ನನ್ನನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಸರಿಯಾಗಿ ಕುಳಿತುಕೊಳ್ಳುವ ದೊಡ್ಡ ಕೊಠಡಿಯ ವ್ಯವಸ್ಥೆ ಮನಾಡುವಂತೆ ಸಹಾಯಕ ಕಮಿಷನರ್‌ಗೆ ಶಾಸಕರು ಸೂಚನೆಯನ್ನು ನೀಡಿದರು.

ಮಿನಿ ವಿಧಾನ ಸೌಧದಲ್ಲಿ ನೂತನ ಶಾಸಕರಿಗೆ ನೂತನ ಕಚೇರಿಯು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ತುರ್ತಾಗಿ ಕಚೇರಿಯ ಕೆಲಸ ನಡೆಯಲಿದೆ.





























