ಪುತ್ತೂರು : ಫೇಸ್ಬುಕ್ ನಲ್ಲಿ ಶಾಸಕರ ಪೋಸ್ಟ್ ಹಾಕಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಮನೆಗೆ ತೆರಳಿ ಗದ್ದಲ ಸೃಷ್ಟಿಸಿದ ಪ್ರಮೀತ್ ರಾವ್ ರವರ ಮನೆಗೆ ಪುತ್ತಿಲಪರಿವಾರದ ಪ್ರಮುಖರು ಭೇಟಿ ನೀಡಿದರು.

ಪ್ರಮಿತ್ ರಾವ್ ರವರ ಮನೆಗೆ ಭೇಟಿ ನೀಡಿದ ಪುತ್ತಿಲಪರಿವಾರದ ಪ್ರಮುಖರು ಪ್ರಮಿತ್ ರವರಿಗೆ ಧೈರ್ಯ ತುಂಬಿದರು.
ಸುಳ್ಯ ಜಯನಗರ ನಿವಾಸಿ ಪ್ರಮೀತ್ ಎಂಬ ಯುವಕ ತನ್ನ ಫೇಸ್ಬುಕ್ ಖಾತೆಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರ ಕುರಿತು ಬರಹವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಮೇ.24 ರಂದು ತಡರಾತ್ರಿ ಪುತ್ತೂರಿನಿಂದ ಶಾಸಕರ ಅಭಿಮಾನಿ ಬಳಗದ ಸುಮಾರು 15ಕ್ಕೂ ಹೆಚ್ಚು ಯುವಕರ ತಂಡ ಸುಳ್ಯ ಜಯನಗರದಲ್ಲಿರುವ ಪ್ರಮೀತ್ ರವರ ನಿವಾಸಕ್ಕೆ ತೆರಳಿ ಫೇಸ್ಬುಕ್ ನಿಂದ ಬರೆದ ಪೋಸ್ಟನ್ನು ಡಿಲೀಟ್ ಮಾಡುವಂತೆ ಮತ್ತು ಶಾಸಕರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು, ಇತ್ತ ಈ ವಿಷಯ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಎರಡು ಕಡೆಯವರನ್ನು ಸುಳ್ಯ ಠಾಣೆಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ ಘಟನೆ ನಡೆದಿತ್ತು.



























