ಪುತ್ತೂರು : ಅಕ್ಷಯ ಕಾಲೇಜಿನ ಆಶ್ರಯದಲ್ಲಿ ಆದ್ವಯ ಸಾಹಿತ್ಯ ಸಂಘವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ನ ಪುತ್ತೂರು ತಾಲೂಕಿನ ಅಧ್ಯಕ್ಷರಾದ ಉಮೇಶ್ ನಾಯಕ್ ಉದ್ಘಾಟಿಸಿ, ಉದ್ಗಾಟನಾ ಭಾಷಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ವಹಿಸಿದ್ದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್ ಟಿ ಎ ಹಾಗೂ ಅದ್ವಯ ಸಾಹಿತ್ಯ ಸಂಘದ ಸಂಯೋಜಕಿಯಾದ ಆಶಿಕಾ ,
ಅದ್ವಯ ಸಾಹಿತ್ಯ ಸಂಘದ ಅದ್ಯಕ್ಷರಾದ ಲಿಖಿತ್ ಎ ವಿ ,ಉಪಾಧ್ಯಕ್ಷರಾದ ಕುಮಾರಿ ಭವ್ಯಶ್ರಿ ಉಪಸ್ಥಿತರಿದ್ದರು.

ಅದ್ವಯ ಸಾಹಿತ್ಯ ಸಂಘದ ಅಧ್ಯಕ್ಷರಾದ ಲಿಖಿತ್ ಎ ವಿ ಸ್ವಾಗತಿಸಿ, ಉಪಾಧ್ಯಕ್ಷೆಯಾದ ಭವ್ಯಶ್ರೀ ವಂದಿಸಿದರು.
ಅನ್ನಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.