ಪುತ್ತೂರು : ವಿಜಯೋತ್ಸವ ಮೆರವಣಿಗೆ ರದ್ದು ತೀರ್ಮಾನ ಕಾಂಗ್ರೆಸ್ ಪಕ್ಷದ ಪ್ರಮುಖರದ್ದು ಹೊರತು ಶಾಸಕರದ್ದಲ್ಲ ಎಂದರು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಗೆದ್ದು ಶಾಸಕರಾಗಿ ಆಯ್ಕೆಯಾಗಿರುವುದರಿಂದ ಪಕ್ಷದ ವತಿಯಿಂದ ಸಂಭ್ರಮದ ವಿಜಯೋತ್ಸವ ಆಚರಿಸಬೇಕೆಂದು ಕಾರ್ಯಕರ್ತರ ಬಯಕೆ ಸಹಜವಾಗಿರುತ್ತದೆ. ಕಳೆದ ಸೋಮವಾರ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಬೊಳ್ವಾರಿನಿಂದ – ದರ್ಬೆಯವರೆಗೆ ವಿಜಯೋತ್ಸವದ ಮೆರವಣಿಗೆ ನಡೆಸುವುದೆಂದು ತೀರ್ಮಾನಿಸಲಾಗಿತ್ತು. ಜೂ.3 ಶನಿವಾರ ನಡೆಯಲಿರುವ ವಿಜಯೋತ್ಸವ ಕಾರ್ಯಕ್ರಮದ ಬಗ್ಗೆ ಪೂರ್ವಬಾವಿ ಸಭೆಯಲ್ಲಿ ಹವಾಮಾನ ವರದಿಯಂತೆ ಶುಕ್ರವಾರವೇ ಮುಂಗಾರು ಮಳೆ ಪ್ರಾರಂಭವಾಗುವ ಮುನ್ಸೂಚನೆ ಇರುವುದರಿಂದ ವಿಜಯೋತ್ಸವದ ಮೆರವಣಿಗೆಗೆ ಮಳೆ ಅಡ್ಡಿಯಾದೀತು ಎಂಬ ಸಂಶಯ ಹಾಗೂ ಈಗಾಗಲೇ ನಾಮಪತ್ರ ಸಲ್ಲಿಸುವ ದಿನ ದರ್ಬೆಯಿಂದ – ಕಿಲ್ಲೆ ಮೈದಾನವರೆಗೆ ಮೆರವಣಿಗೆ ನಡೆಸಲಾಗಿದೆ., ಬಹಿರಂಗ ಪ್ರಚಾರದ ಅಂತಿಮ ದಿನ ಬೊಳ್ವಾರಿನಿಂದ – ದರ್ಬೆಯವರೆಗೆ ಬೃಹತ್ ರೋಡ್ ಶೋ ನಡೆಸಲಾಗಿದೆ.
ಚುನಾವಣ ಫಲಿತಾಂಶದ ದಿನ ಅಶೋಕ್ ಕುಮಾರ್ ರೈ ಯವರು ಶಾಸಕರಾಗಿ ಆಯ್ಕೆಯಾಗಿ ಬಂದ ಸಂದರ್ಭದಲ್ಲಿ ಮಾಣಿಯಿಂದ – ಪುತ್ತೂರಿನ ದರ್ಬೆಯ ಚುನಾವಣಾ ಕಚೇರಿ ತನಕ ಬೃಹತ್ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಲಾಗಿದೆ.
ಪುನಃ ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸುವುದು ಅಭಾಸವಾಗಿ ಕಾಣುತ್ತದೆ. ಮೆರವಣಿಗೆ ನಡೆಸಿದಾಗ ಟ್ರಾಫಿಕ್ ಜಾಮ್ ಆಗಿ ಜನರಿಗೆ ತೊಂದರೆ ಆಗುತ್ತದೆ. ಮೆರವಣಿಗೆ ನಡೆಸಿ ದರ್ಬೆಯಲ್ಲಿ ಕೊನೆಗೊಳಿಸಿದರೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಅವಕಾಶವಾಗುವುದಿಲ್ಲ., ಹಾಲ್ ನಲ್ಲಿ ಸಭೆ ನಡೆಸಿದರೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಒಳ್ಳೆಯ ಭೋಜನ ನೀಡಬಹುದು ಎಂಬ ಕಾರಣಕ್ಕಾಗಿ ವಿಜಯೋತ್ಸವ ಮೆರವಣಿಗೆ ಕಾರ್ಯಕ್ರಮ ರದ್ದುಪಡಿಸಿ, ಪುತ್ತೂರು ಪುರಭವನದಲ್ಲಿ ಶಾಸಕರಿಗೆ ಅಭಿನಂದನೆ, ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತ ಸಮರ್ಪಣೆ ಕಾರ್ಯಕ್ರಮ ನಡೆಸುವ ತೀರ್ಮಾನವು ಪಕ್ಷದ ಪ್ರಮುಖರ ತೀರ್ಮಾನವೇ ಹೊರತು ಶಾಸಕ ಅಶೋಕ್ ಕುಮಾರ್ ರೈ ಯವರ ಒಬ್ಬರ ತೀರ್ಮಾನವಲ್ಲ ಎಂಬುದರ ಬಗ್ಗೆ ಕಾರ್ಯಕರ್ತರಿಗೆ ತಿಳಿಸುತ್ತಾ.., ಶನಿವಾರ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸುತ್ತಿದ್ದೇನೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದ್ ಆಲಿ ರವರು ತಿಳಿಸಿದ್ದಾರೆ.




























