ವಿಟ್ಲ : ಕಾರು ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಚಂದಳಿಕೆ ತಿರುವಿನಲ್ಲಿ ಸಂಭವಿಸಿದೆ.

ಕೇರಳದ ಉಪ್ಪಳ ನಿವಾಸಿಗಳು ಹೊಚ್ಚ ಹೊಸ ಬೆನ್ಸ್ ಕಾರಿನಲ್ಲಿ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಕಾರಿನ ಎರಡು ಏರ್ ಬ್ಯಾಗ್ ತೆರೆದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಕಾರು ಜಖಂಗೊಂಡಿದೆ.

ರಸ್ತೆ ಬದಿಯಲ್ಲಿ ಮಣ್ಣಿನ ರಾಶಿ ಇದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




























