ಪುತ್ತೂರು : ಕೆಲ ಸಮಯದ ಹಿಂದೆ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಹೇಶ್ ಬಂಧಿತ ಆರೋಪಿ.
ಬಂಧಿತ ಆರೋಪಿಯಿಂದ 1.48 ಗ್ರಾಂ ಚಿನ್ನದ ತಾಯಿತಾ, 4.12 ಗ್ರಾಂ ಚಿನ್ನ, 7.99 ಗ್ರಾಂ ಚಿನ್ನ ಮತ್ತು 7 ಬಿಳಿ ಬಣ್ಣದ ಹರಳುಗಳು., 10.98 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಒಟ್ಟು 24.57 ಗ್ರಾಂ ಚಿನ್ನವನ್ನು ಮತ್ತು 7 ಬಿಳಿ ಬಣ್ಣದ ಹರಳುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ಜೂ.3 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.