ಬೆಳ್ತಂಗಡಿ : ಅರ್ವ ಎಂಟರ್ ಪ್ರೈಸಸ್ ಕೆದ್ದುನಲ್ಲಿ ಪಿಎಫ್ ಜನಸೇವಾ ಕೇಂದ್ರದ ಮಾಲಕ, ಕೃಷಿಕ ಧರ್ಣಪ್ಪ ಆಚಾರ್ಯ ಮತ್ತು ವಸಂತಿ ಆಚಾರ್ಯ ಪಾಲಬೆ ರವರ ಪುತ್ರ ಸುಬ್ರಹ್ಮಣ್ಯ ಆಚಾರ್ಯ ಮತ್ತು ಕೊಕ್ಕಡ ನಾವಳೆ ಶ್ರೀನಿವಾಸ ಆಚಾರ್ಯ ಮತ್ತು ಪ್ರೇಮ ದಂಪತಿ ಪುತ್ರಿ ಸವಿತಾ ರವರ ವಿವಾಹಕ್ಕೆ ಪ್ರಧಾನಿ ಮೋದಿ ರವರು ಶುಭಾಶಯ ಕೋರಿ ಪತ್ರ ರವಾನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿ ಪ್ರಧಾನಿ ರವರ ಕಾರ್ಯಾಲಯದಿಂದ ಪ್ರಧಾನಮಂತ್ರಿ ರವರ ಸಹಿಯುಳ್ಳ ವಿವಾಹ ಶುಭಾಶಯ ಪತ್ರವು ಸುಬ್ರಹ್ಮಣ್ಯ ರವರಿಗೆ ತಲುಪಿದೆ.