ಪುತ್ತೂರು : ದರ್ಬೆಯ ಪ್ರತಿಷ್ಠಿತ ಶಾಪಿಂಗ್ ಮಾಲ್ ಸಿಬ್ಬಂದಿಗಳಿಗೆ ತಲ್ವಾರ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ಪುತ್ತೂರಿನ ಪ್ರತಿಷ್ಠಿತ ಬಾರೊಂದರ ಬಳಿ ನಡೆದಿದೆ ಎಂದು ವರದಿಯಾಗಿದೆ.
ಶಾಪಿಂಗ್ ಮಾಲ್ ನಲ್ಲಿ ಕಾರ್ಯ ನಿರ್ವಹಿಸುವ 8 ರಿಂದ 10 ಮಂದಿ ಸಿಬ್ಬಂದಿಗಳು ಜೂ.9 ರಂದು ರಾತ್ರಿ ಕೆಲಸ ಮುಗಿಸಿ ಬರ್ತ್ಡೇ ಪಾರ್ಟಿ ಸಂಭ್ರಮದಲ್ಲಿದ್ದ ವೇಳೆ ಓರ್ವ ಸಿಬ್ಬಂದಿ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ತಲ್ವಾರನ್ನು ಹಿಡಿದುಕೊಂಡು ಸಿಬ್ಬಂದಿಗಳಿದ್ದ ಜಾಗಕ್ಕೆ ಬಂದು ಬೆದರಿಕೆ ಹಾಕಿದ್ದಾನೆನ್ನಲಾಗಿದೆ.

ಈ ವೇಳೆ ಹೆದರಿದ ಸಿಬ್ಬಂದಿಯೋರ್ವ ಓಡುವ ಭರದಲ್ಲಿ ಬಿದ್ದು ಮೂರು ಹಲ್ಲು ಮುರಿದಿದೆನ್ನಲಾಗಿದೆ.
ತಲ್ವಾರ್ ತೋರಿಸಿ ಬೆದರಿಸಿದ ಯುವಕನ ವಿರುದ್ಧ ಶಾಪಿಂಗ್ ಮಾಲ್ ಸಿಬ್ಬಂದಿಗಳು ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
























