ಉಪ್ಪಿನಂಗಡಿ : ಕುಮಾರಧಾರಾ ನದಿಯ ಹಳೇ ಸೇತುವೆಯಲ್ಲಿ ಮಾದಕ ಅಮಲು ಪದಾರ್ಥ ಸೇವನೆ ಮಾಡಿ, ಸಾರ್ವಜನಿಕವಾಗಿ ಹೀನಾಯ ಮಾತುಗಳನ್ನಾಡುತ್ತಾ ಅನುಚಿತ ವರ್ತನೆ ತೋರಿದ ನಿಜಾಮುದ್ದೀನ್ (21) ಎಂಬಾತನನ್ನು ಉಪ್ಪಿನಂಗಡಿ ಎಸ್.ಐ ರಾಜೇಶ್ ಕೆ ಬಂಧಿಸಿದ್ದಾರೆ.
ಬಂಧಿತ ನಿಜಾಮುದ್ದೀನ್ 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಲು ನಿವಾಸಿಯಾಗಿದ್ದು, ಮಾದಕ ದ್ರವ್ಯದ ಚಟಕ್ಕೆ ಒಳಗಾಗಿರುವ ಯುವಕನಾಗಿದ್ದಾನೆ.
ಪ್ರಸಕ್ತ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ಕ್ರಯಗೊಳ್ಳುತ್ತಿದ್ದು, ಹಲವಾರು ಮನೆಗಳ ಯುವಕ-ಯುವತಿಯರು ಈ ಜಾಲಕ್ಕೆ ಬಲಿಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಆತಂಕ ವ್ಯಕ್ತವಾಗಿದೆ.
























