ಪುತ್ತೂರು : ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ನ್ಯಾಯಮೂರ್ತಿಗಳಾದ ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ ರವರಿಗೆ ಅಭಿನಂದನಾ ಸಭೆ ಮತ್ತು ಕಾನೂನು ಕಾರ್ಯಾಗಾರ ‘Circumstantial Evidence’ ಜೂ.17 ರಂದು ಪುತ್ತೂರು ಪರಾಶರ ಭವನದಲ್ಲಿ ನಡೆಯಲಿದೆ.
ನ್ಯಾಯಮೂರ್ತಿಗಳಾದ ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ ರವರು ಅಭಿನಂದಿಸಲ್ಪಡಲಿದ್ದು, ಬಳಿಕ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಪುತ್ತೂರು ವಕೀಲ ಸಂಘದ ಅಧ್ಯಕ್ಷರಾದ ಮನೋಹರ ಕೆ.ವಿ. ರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























