ವಿಟ್ಲ : ಕನ್ಯಾನದಲ್ಲಿರುವ ಭಾರತ್ ಸೇವಾ ಆಶ್ರಮಕ್ಕೆ ಪುತ್ತಿಲ ಪರಿವಾರದ ನಿಯೋಗವು ಭೇಟಿ ನೀಡಿ ಪುತ್ತಿಲ ಪರಿವಾರದ ವತಿಯಿಂದ 25000 ರೂ. ದೇಣಿಗೆಯನ್ನು ನೀಡಿದರು.

ಈ ಆಶ್ರಮದಲ್ಲಿರುವ ಜನಸಂಘ ಕಾಲದಿಂದಲೂ ನಿಶ್ವಾರ್ಥ ಸೇವೆಯನ್ನು ಸಲ್ಲಿಸಿರುವ ಹಿಂದೂ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಗ್ರಂಥಗಳ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿರುವ ಶಶಿಕಾಂತ್ ಬೋರ್ಕರ್ ರನ್ನು ಸನ್ಮಾನಿಸಿ, ವೈಯಕ್ತಿಕ ನೆಲೆಯಲ್ಲಿ 20000 ರೂ. ಅನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಮಾರ್ತಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


























