ಪುತ್ತೂರು : ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರಿಗೆ ಪುತ್ತಿಲ ಪರಿವಾರದ ವತಿಯಿಂದ ಸಹಾಯಧನ ವಿತರಿಸಲಾಯಿತು.

ಚುನಾವಣೆ ಕಳೆದ ನಂತರ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ದೌರ್ಜನ್ಯಕ್ಕೊಳಕ್ಕಾದ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಪುತ್ತಿಲ ಪರಿವಾರ ಅವರ ಆರೋಗ್ಯ ವಿಚಾರಿಸಿದರು.
ಈಗಾಗಲೇ ಆಸ್ಪತ್ರೆಯ ಹಾಗೂ ಇತರ ಖರ್ಚು ವೆಚ್ಚ ನೀಡಲಾಗಿದ್ದು, ದೌರ್ಜನ್ಯಕ್ಕೊಳಗಾದವರು ಕೆಲ ತಿಂಗಳು ಕೆಲಸಕ್ಕೆ ಹೋಗಲು ಸಾಧ್ಯವಾಗದಿರುವುದರಿಂದ ಅವರ ದೈನಂದಿನ ಖರ್ಚು ವೆಚ್ಚಗಳಿಗಾಗಿ ಈ ಸಂದರ್ಭ ಪುತ್ತಿಲ ಪರಿವಾರದ ವತಿಯಿಂದ ಸಂಗ್ರಹಿಸಿದ 1 ಲಕ್ಷ ರೂ. ಅನ್ನು ನೀಡಲಾಯಿತು.

ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತಾ, ಅಂಬಿಕಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜ, ಭೀಮ್ ಭಟ್ , ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಅವಿನಾಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

























