ಪುತ್ತೂರು: ಕಬಕ ಬಿಲ್ಲವ ಗ್ರಾಮ ಸಮಿತಿಯ 2023-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.
ಸಂತೋಷ್ ಜೆ.ಪಿ. ಮುರ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಬಿಲ್ಲವ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ
ಹೊನ್ನಪ್ಪ ಪೂಜಾರಿ ಕೈಂದಾಡಿ , ಪುತ್ತೂರು ಬಿಲ್ಲವ ಸಂಘದ ವಿಮಲ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಕಬಕ ಬಿಲ್ಲವ ಗ್ರಾಮ ಸಮಿತಿಯ ನೂತನ ಸಾಲಿನ ಅಧ್ಯಕ್ಷರಾಗಿ ವಸಂತ ಪೂಜಾರಿ ಶೇವಿರೆ, ಉಪಾಧ್ಯಕ್ಷರಾಗಿ ಧನಂಜಯ ಪಟ್ಲ, ಕಾರ್ಯದರ್ಶಿಯಾಗಿ ನಿತಿನ್ ಕಬಕ, ಜೊತೆ ಕಾರ್ಯದರ್ಶಿಯಾಗಿ ಮನೋಜ್ ಪೆರಿಯತ್ತೋಡಿ, ಕೋಶಾಧಿಕಾರಿಯಾಗಿ ಮನೋಹರ್ ಕಾರ್ಜಾಲು, ಗೌರವಾಧ್ಯಕ್ಷರಾಗಿ ಜಿನ್ನಪ್ಪ ಪೂಜಾರಿ ರನ್ನು ಆಯ್ಕೆ ಮಾಡಲಾಯಿತು.
ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಯಶೋಧ ಬಿರಾವು, ಉಪಾಧ್ಯಕ್ಷರಾಗಿ ಬೇಬಿ ಶೇವಿರೆ, ಕಾರ್ಯದರ್ಶಿಯಾಗಿ ಪ್ರಿಯಾಂಕ ಹರೀಶ್, ಜೊತೆ ಕಾರ್ಯದರ್ಶಿಯಾಗಿ ಆಶ್ವಿನ್, ಕೋಶಾಧಿಕಾರಿಯಾಗಿ ಮಮತಾ ಆಯ್ಕೆಯಾದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.

























