ಕಡಬ :. ಕೋಡಿಂಬಾಳದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ಶ್ರೀ ರಾಮ ಸೇನೆ ಮುಖಂಡ ಗೋಪಾಲ ನಾಯ್ಕ್ ಮೇಲಿನ ಮನೆ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೇ.2 ರಂದು ರಾತ್ರಿ 9.10 ಸುಮಾರಿಗೆ ಕಡಬದಿಂದ ಕೋಡಿಂಬಾಳ ದಲ್ಲಿರುವ. ತನ್ನ ಸಂಬಂಧಿಕರಿಗೆ ಔಷಧಿ ತೆಗೆದು ಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅನಿಲ್,ಅಜಯ್ ಹಾಗೂ ಇನ್ನಿತರರು ಅಜ್ಜಿಕಟ್ಟೆ ಎಂಬಲ್ಲಿ ನನ್ನನ್ನು ತಡೆದು ನಿಲ್ಲಿಸಿ ನನ್ನ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಗೋಪಾಲ ನಾಯ್ಕ್ ಆರೋಪಿಸಿದ್ದಾರೆ. ಘಟನೆ ಕುರಿತಂತೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಗೋಪಾಲ್ ರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.