ಪುತ್ತೂರು : ಇನ್ನರ್‌ವೀಲ್ ಕ್ಲಬ್‌ನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷೆಯಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ಶ್ರೀದೇವಿ ರೈ, ಕೋಶಾಧಿಕಾರಿಯಾಗಿ ಸೀಮಾ ನಾಗರಾಜ್ ರವರು ಆಯ್ಕೆಗೊಂಡಿದ್ದಾರೆ.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.15 ರಂದು ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಲಿದೆ. ಪದಗ್ರಹಣವನ್ನು ಜಿಲ್ಲಾ ಐಎಸ್ಒ ರಜನಿ ಭಟ್ ನಡೆಸಿಕೊಡಲಿದ್ದಾರೆ.
ಕ್ಲಬ್‌ನ ಸಂಪಾದಕಿಯಾಗಿ ಸುಧಾ ಕಾರ್ಯಪ್ಪ, ಐಎಸ್ಒ ಆಗಿ ಆಶಾ ನಾಯಕ್, ವೆಬ್ ಕೋ-ಆರ್ಡಿನೇಟರ್ ಆಗಿ ವಚನಾ ಜಯರಾಮ್ ಆಯ್ಕೆಯಾಗಿರುತ್ತಾರೆ.
ನಿಕಟಪೂರ್ವ ಅಧ್ಯಕ್ಷೆಯಾಗಿ ಟೈನಿ ದೀಪಕ್, ಉಪಾಧ್ಯಕ್ಷೆಯಾಗಿ ರಾಜೇಶ್ವರಿ ಆಚಾರ್ ಹಾಗೂ ನಿರ್ದೇಶಕರುಗಳಾಗಿ ರಾಜೇಶ್ವರಿ ಬಲರಾಮ್, ರಮಾ ಪ್ರಭಾಕರ್, ಪುಷ್ಪಾ ಕೆದಿಲಾಯ, ವೈ. ವಿಜಯಲಕ್ಷ್ಮೀ ಶೆಣೈ ಮತ್ತು ವೀಣಾ ಬಿ.ಕೆ ಆಯ್ಕೆಯಾಗಿರುತ್ತಾರೆ.
“ಶೈನ್ ಎ ಲೈಟ್” ಎನ್ನುವುದು ಇನ್ನರ್‌ವೀಲ್ ಕ್ಲಬ್‌ನ ಈ ವರ್ಷದ ಧ್ಯೇಯ ವಾಕ್ಯ. ಆರೋಗ್ಯ, ಸ್ವಚ್ಛತೆ, ಕಡಿಮೆ ಪೇಪರ್ ಬಳಕೆ, ಮಹಿಳಾ ಸಬಲೀಕರಣ, ಪರಿಸರ ಕಾಳಜಿ, ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ಹೀಗೆ ಹಲವಾರು ಯೋಜನೆಗಳು ಈ ಧ್ಯೇಯ ವಾಕ್ಯದಡಿ ಬರುತ್ತದೆ. ಕ್ಲಬ್‌ನ ಎಲ್ಲಾ ಸದಸ್ಯರುಗಳು ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಾಡಲಿದ್ದಾರೆ ಎಂದು ನಿಯೋಜಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ತಿಳಿಸಿದ್ದಾರೆ.