ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವಿಟ್ಲ ತಾಲೂಕು ಅಳಿಕೆ ವಲಯದ ವತಿಯಿಂದ ಪರಿಸರ ಜಾಗೃತಿ ಶಿಬಿರ ಹಾಗೂ ಗಿಡ ನಾಟಿ ಕಾರ್ಯಕ್ರಮವು ನೀರ್ಕಜೆ ಒಕ್ಕೂಟದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಭವ್ಯ ರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರವೀಣ್ ಸರಳಾಯ ಶಾಲಾ ಅಭಿವೃದ್ಧಿ ಸಮಿತಿ ನೀರ್ಕಜೆ, ಇವರು ಸಾವಯವ ಕೃಷಿಯ ಮಹತ್ವವನ್ನು ತನ್ನ ಅನುಭವದ ಮಾತಿನ ಮೂಲಕ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದರವರು ಪರಿಸರ ಜಾಗೃತಿಯ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು.

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ರವಿನಾಯಕ ರವರು ಪರಿಸರ ಕಾರ್ಯಕ್ರಮದ ಮಹತ್ವದ ಬಗ್ಗೆ ವಿಚಾರ ಪ್ರಸ್ತಾಪ ಮಾಡಿದರು. ವಲಯ ಮೇಲ್ವಿಚಾರಕಿ ಮಾಲತಿ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ನೀರ್ಕಜೆ ಒಕ್ಕೂಟದ ಸೇವಾ ಪ್ರತಿನಿಧಿ ಸರಿತಾ ರವರು ನಿರೂಪಿಸಿ, ಸ್ವಾಗತಿಸಿದರು ಶಾಲಾ ಶಿಕ್ಷಕಿ ಶೀಲಾವತಿ ಧನ್ಯವಾದಗೈದರು. ಶಾಲೆಯಲ್ಲಿ ಹಣ್ಣು ಹಂಪಲು ಮತ್ತು ಅರಣ್ಯ ಗಿಡಗಳನ್ನು ಅತಿಥಿಗಳಿಂದ ನಾಟಿ ಮಾಡಲಾಯಿತು.




























