ಪುತ್ತೂರು : ಎಂಬಿಎ ವಿದ್ಯಾರ್ಥಿ ದಿಢೀರ್ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ನಡೆದಿದೆ.
ಬೆಳ್ಳಾರೆಯ ಉದ್ಯಮಿ, ಪ್ರಸಾದ್ ಹಾರ್ಡ್ ವೇರ್ಸ್ ನ ಮಾಲಕ ಸುಬ್ರಹ್ಮಣ್ಯ ಜೋಶಿಯವರ ಪುತ್ರ ಶರತ್ ಜೋಶಿ (21) ಮೃತ ಯುವಕ.
ಶರತ್ ಜೋಷಿಯವರು ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ಪರೀಕ್ಷೆ ಬರೆದು ಮನೆಗೆ ಬಂದಿದ್ದರು. ರಾತ್ರಿ ತೀವ್ರ ಅಸೌಖ್ಯಗೊಂಡಿದ್ದು, ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆನ್ನಲಾಗಿದೆ.
ಹೃದಯಘಾತಕ್ಕೆ ತುತ್ತಾಗಿ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೃತರು ತಂದೆ, ತಾಯಿ ಶ್ಯಾಮಲ ಎಸ್. ಜೋಶಿ, ಸಹೋದರಿ ಡಾ. ಶರಣ್ಯ ಅಖಿಲೇಶ್ ಸೇರಿದಂತೆ ಕುಟುಂಬಸ್ಥರು ಅಗಲಿದ್ದಾರೆ.

























