ಪುತ್ತೂರು : ಬಸ್ ನಿಲ್ದಾಣದ ಬಳಿ ಕಾರ್ಯ ನಿರ್ವಹಿಸುತ್ತಿರುವ ‘ಕಾಮತ್’ ಹೋಟೆಲ್ ಅನ್ನು ಪ್ರಾರಂಭಿಸಿದ ದಿ. ವಿಠ್ಠಲ್ ಕಾಮತ್ ರವರ ಪತ್ನಿ ಸುನಂದಾ ಕಾಮತ್ (81) ರವರು ಜೂ.17 ರಂದು ನಿಧನರಾದರು.

ಕಲ್ಲಾರೆಯಲ್ಲಿರುವ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ ಸುನಂದಾ ಕಾಮತ್ ಕೊನೆಯುಸಿರೆಳೆದರು.
ಮೃತರು ಪುತ್ರರಾದ ಸುರೇಶ್ ಕಾಮತ್, ದಿನೇಶ್ ಕಾಮತ್, ಪುತ್ರಿ ರೂಪ ಕಾಮತ್, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..


























