ಪುತ್ತೂರು : ಚಿಕ್ಕಪುತ್ತೂರು ನಿವಾಸಿ ಚೇತನ್ ಕುಮಾರ್ ಅವರ ಪತ್ನಿ ಮಾಲತಿ (43) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.18 ರಂದು ನಿಧನರಾದರು.

ನೆಲ್ಲಿಕಟ್ಟೆ ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಬಿಸಿಯೂಟ ತಯಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಮಾಲತಿ ರವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಅವರು ನಿಧನರಾಗಿದ್ದಾರೆ.
ಮೃತರು ಪತಿ ಚೇತನ್ ಕುಮಾರ್, ಪುತ್ರಿ ವರ್ಷಾ ರನ್ನು ಅಗಲಿದ್ದಾರೆ.

























