ಮಧ್ವ : ಹೆತ್ತ ತಾಯಿ ಹೊತ್ತ ಮಣ್ಣು ಸ್ವರ್ಗಕ್ಕಿಂತ ಮಿಗಿಲು. ಅನ್ನುವಂತಹ ಧ್ಯೇಯ ಉದ್ದೇಶ ಇಟ್ಟುಕೊಂಡು ಸಂಸ್ಕಾರಯುತ ಸಮಾಜವನ್ನು ಕಟ್ಟಬೇಕು ಅನ್ನುವಂತಹ ನೆಲೆಯೊಳಗೆ, ಚಿಂತನೆಯೊಂದಿಗೆ ಶಿವಾಜಿ ಬಳಗ (ರಿ) ಮತ್ತು ಶಿವಾಜಿ ಮಾತೃ ಸೇವಾ ಟ್ರಸ್ಟ್ (ರಿ) ಶ್ರೀ ರಾಮನಗರ ಇದರ ಸಂಯುಕ್ತ ಆಶ್ರಯದಲ್ಲಿ ಮಾತೃ ಪೂಜಾನ ದಿನ ಮತ್ತು ಬಡ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಶ್ರೀದುರ್ಗಾ ಕಲ್ಯಾಣ ಮಂಟಪ ಮಧ್ವದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆಯ ಪ್ರಾಂಶುಪಾಲ ಸಂತೋಷ್ ಕುಮಾರ್ ಸನಿಲ್ ಮಾತಾನಾಡಿ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಶಿವಾಜಿ ಬಳಗದ ಪಾತ್ರ ಮಹತ್ವದ್ದು, ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಶಿವಾಜಿ ಬಳಗದಿಂದ ಆಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಗ್ಗ ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶಿವಪ್ಪ ಗೌಡ ನಿನ್ನಿಕಲ್ಲು, ಮದ್ವ ಅಯ್ಯಪ್ಪ ಸೇವಾ ಸಮಿತಿಯ ಗೌರವ ಸಲಹೆಗಾರರಾದ ಸುರೇಂದ್ರ ಪೂಜಾರಿ ಮಧ್ವ ನೀರಲ್ಕೆ, ಮಧ್ವ ಅಯ್ಯಪ್ಪ ಭಜನಾ ಮಂದಿರದ ಅರ್ಚಕರಾದ ರಮೇಶ್ ಆಚಾರ್ಯ, ಕಾವಳಪಡೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮಧ್ವ ಕಟ್ಟೆ ಹಾಗೂ ಶಿವಾಜಿ ಬಳಗದ ಅಧ್ಯಕ್ಷ ನಿತಿನ್ ಮಧ್ವ, ಮಾತೃ ಬಳಗದ ಅಧ್ಯಕ್ಷೆ ರೇಣುಕಾ, ಪ್ರಧಾನ ಕಾರ್ಯದರ್ಶಿಗಳಾದ ಅವಿನಾಶ್ ಮತ್ತು ಜಯಮಾಲಾ ಮಧ್ವ ಹಾಗೂ ಶಿವಾಜಿ ಬಳಗದ ಗೌರವಾಧ್ಯಕ್ಷ ಪ್ರಕಾಶ್ ಮಧ್ವ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೇಣುಕಾ ಸ್ವಾಗತಿಸಿ, ಉಪನ್ಯಾಸಕ ಶಿವರಾಜ್ ಗಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.





























